Home Lyrics Ambarada Thaare Song Lyrics in Kannada – Anuragada Alegalu

Ambarada Thaare Song Lyrics in Kannada – Anuragada Alegalu

43
0
Ambarada Taare Song Kannada Lyrics

ರಾಘವೇಂದ್ರ ರಾಜ್‌ಕುಮಾರ್‌, ಮಮತಾಶ್ರೀ, ಬಾಲರಾಜ್‌, ವಿನಯ್‌ ರಾಜ್‌ಕುಮಾರ್‌, ಕೆ.ಎಸ್.ಅಶ್ವತ್‌ ನಟಿಸಿರುವ ಅನುರಾಗದ ಅಲೆಗಳು ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಮಂಜುಳಾ ಗುರುರಾಜ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆಕಾಶ್ ಆಡಿಯೋ ಒಡೆತನದಲ್ಲಿದೆ.

  • ಹಾಡು : ಅಂಬರದ ತಾರೆ ಅಂಗೈಯಲ್ಲಿದೆ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ರಾಘವೇಂದ್ರ ರಾಜ್‌ಕುಮಾರ್‌, ಮಂಜುಳಾ ಗುರುರಾಜ್

Ambarada Thaare Song Lyrics in Kannada

ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಆಹಾ… ಆಹಾ… ನಾನು ನೀನು ಪ್ರೇಮ ಜೋಡಿ ಆದೆವು
ಕುಹೂ ಕುಹೂ ನಾದವೀಗ ವೇಣುಗಾನ ವಾದವು
ಆಹಾ… ಆಹಾ… ನಾನು ನೀನು ಪ್ರೇಮ ಜೋಡಿ ಆದೆವು
ಕುಹೂ ಕುಹೂ ನಾದವೀಗ ವೇಣುಗಾನ ವಾದವು

ನೀನಾ ಅವಳು ಓಲೆ ಮಗಳು ಅಭಿಮಾನ ಸುರಿದವಳು
ಹುಣ್ಣಿಮೆಯ ತಿರುಳು ನೀನಾ ಅವಳು
ಬರೆಯಲು ಕೋಟಿ ಪುಟಗಳು ಸಾಲದಾಗ
ಮುಡಿಯಲು ಕೋಟಿ ಸುಮಗಳು ಸಾಲದೀಗ
ಸ್ವರಗಳನ್ನೇ ಸುಮಗಳಾಗಿ ಮುಡಿಸುವೆ ಪ್ರೇಮಕೋಗಿಲೆ
ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಆಹಾ… ಆಹಾ… ನಾನು ನೀನು ಪ್ರೇಮ ಜೋಡಿ ಆದೆವು
ಕುಹೂ ಕುಹೂ ನಾದವೀಗ ವೇಣುಗಾನ ವಾದವು
ಆಹಾ… ಆಹಾ… ನಾನು ನೀನು ಪ್ರೇಮ ಜೋಡಿ ಆದೆವು
ಕುಹೂ ಕುಹೂ ನಾದವೀಗ ವೇಣುಗಾನ ವಾದವು

ನೀನಾ ಅವನು ಮುರಳಿಧರನು ಗಂಧರ್ವನೂ ಹಾಡಲ್ಲಿ
ಮನ್ಮಥ ನೀನಿಲ್ಲಿ ನೀನಾ ಅವನು
ಅರಿಯದೆ ಹಾಡು ಬಂದಿತು ಬಾಲ್ಯದಲ್ಲಿ
ಕರೆಯದೆ ಪ್ರಣಯ ಬಂದಿತು ಹರೆಯದಲ್ಲಿ
ನಿತ್ಯ ಚೈತ್ರ ಹೃದಯತೋಟ ಹಾಡು ಬಾ ಪ್ರೇಮಕೋಗಿಲೆ
ಅಂಬರದ ತಾರೆ ಅಂಗೈಯಲ್ಲಿದೆ
ಅಂತರಂಗದೋಲೆ ಕಂಗಳಲ್ಲಿದೆ
ಆಹಾ… ಆಹಾ… ನಾನು ನೀನು ಪ್ರೇಮ ಜೋಡಿ ಆದೆವು
ಕುಹೂ ಕುಹೂ ನಾದವೀಗ ವೇಣುಗಾನ ವಾದವು
ಆಹಾ… ಆಹಾ… ನಾನು ನೀನು ಪ್ರೇಮ ಜೋಡಿ ಆದೆವು
ಕುಹೂ ಕುಹೂ ನಾದವೀಗ ವೇಣುಗಾನ ವಾದವು

Ambarada Thaare Song Lyrics in English

Ambarada Thaare Angaiyallide
Antharagadole Kangalallide
Ahaa… Ahaa… Naanu Neenu Prema Jodi Adevu
Kuhu Kuhu Naadaviga Venugaana Vaadavu
Ahaa… Ahaa… Naanu Neenu Prema Jodi Adevu
Kuhu Kuhu Naadaviga Venugaana Vaadavu

Neena Avalu Ole Magalu Abhimana Suridavalu
Hunnimeya Thirulu Neena Avalu
Bareyalu Koti Putagalu Saaladaga
Mudiyalu Koti Sumagalu Saaladiga
Swaragalanne Sumagalagi Mudisuve Premakogile
Ambarada Thaare Angaiyallide
Antharagadole Kangalallide
Ahaa… Ahaa… Naanu Neenu Prema Jodi Adevu
Kuhu Kuhu Naadaviga Venugaana Vaadavu
Ahaa… Ahaa… Naanu Neenu Prema Jodi Adevu
Kuhu Kuhu Naadaviga Venugaana Vaadavu

Neena Avanu Muralidharanu Gandharvanu Haadalli
Manmatha Neenilli Neena Avanu
Ariyade Haadu Bandithu Baalyadalli
Kareyade Pranaya Bandithu Hareyadalli
Nithya Chaitra Hrudaya Thota Haadu Baa Premakogile
Ambarada Thaare Angaiyallide
Antharagadole Kangalallide
Ahaa… Ahaa… Naanu Neenu Prema Jodi Adevu
Kuhu Kuhu Naadaviga Venugaana Vaadavu
Ahaa… Ahaa… Naanu Neenu Prema Jodi Adevu
Kuhu Kuhu Naadaviga Venugaana Vaadavu

Song Details :

  • Song Name : Ambarada Taare
  • Movie Name : Anuragada Alegalu
  • Released On : 9th Aug 1993
  • Cast : Raghavendra Rajkumar, Mamathashree, Balraj, Vinay Rajkumar, K.S.Ashwath
  • Music : Hamsalekha
  • Lyrics : Hamsalekha
  • Singer : Raghavendra Rajkumar, Manjula Gururaj
  • Director : S.Narayan
  • Producer : Smt.Parvathamma Rajkumar
  • Music Label : MRT

LEAVE A REPLY

Please enter your comment!
Please enter your name here