Home Lyrics Kannada Anisuthide Yako Indu Song Lyrics in Kannada – Mungaru Male

Anisuthide Yako Indu Song Lyrics in Kannada – Mungaru Male

98
0
Anisuthide Yaako Indu Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ಪೂಜಾಗಾಂಧಿ, ಅನಂತ್‌ನಾಗ್‌, ದಿಗಂತ್‌ ನಟಿಸಿರುವ ಮುಂಗಾರು ಮಳೆ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಗಾಯಕ ಸೋನು ನಿಗಮ್‌ ಹಾಡಿದ್ದಾರೆ, ಮನೋಮೂರ್ತಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಹಾಡಿನ ಸಾಹಿತ್ಯ ನಾಯಕ ನಾಯಕಿಯ ಜೊತೆಗೆ ಪ್ರೀತಿಯಲ್ಲಿ ಬಿದ್ದ ನಂತರ ಅವನಿಗಾಗುವ ಅನುಭವವನ್ನು ಹೇಳುತ್ತದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from the movie Mungaru Male Starring Goldenstar Ganesh, Pooja Gandhi, Anantnag, Diganth written by Jayant Kaykini sung by singer Sonu Nigam, music composed by Manomurthy, Lyrics Says about his experience after falling in love with heroine. The audio rights of the film are owned by renowned audio company Anand Audio.

Other Songs from Mungaru Male :

  • ಹಾಡು : ಅನಿಸುತಿದೆ ಯಾಕೋ ಇಂದು
  • ಸಂಗೀತ : ಮನೋಮೂರ್ತಿ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Anisuthide Yako Indu Song Lyrics in Kannada

ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗೆ ಬಂದವಳೆಂದು

ಆಹಾ ಎಂತ ಮಧುರ ಯಾತನೆ…
ಕೊಲ್ಲು ಹುಡುಗಿ ಒಮ್ಮೆ ನನ್ನ
ಹಾಗೆ ಸುಮ್ಮನೆ
ಅನಿಸುತಿದೆ ಯಾಕೋ ಇಂದು

ಸುರಿಯುವ ಸೋನೆಯೂ
ಸೂಸಿದೆ ನಿನ್ನದೆ ಪರಿಮಳ
ಇನ್ಯಾರ ಕನಸಲೂ
ನೀನು ಹೋದರೆ ತಳಮಳ
ಪೂರ್ಣ ಚಂದಿರ ರಜಾ ಹಾಕಿದ
ನಿನ್ನಯ ಮೊಗವನು ಕಂಡ ಕ್ಷಣ

ನಾ ಖೈದಿ ನೀನೆ ಸೆರೆಮನೆ
ತಬ್ಬಿ ನನ್ನ ಅಪ್ಪಿಕೊ ಒಮ್ಮೆ…
ಹಾಗೇ ಸುಮ್ಮನೆ…
ಅನಿಸುತಿದೆ ಯಾಕೋ ಇಂದು…

ತುಟಿಗಳ ಹೂವಲಿ
ಆಡದ ಮಾತಿನ ಸಿಹಿಯಿದೆ
ಮನಸಿನ ಪುಟದಲಿ
ಕೇವಲ ನಿನ್ನದೆ ಸಹಿಯಿದೆ
ಹಣೆಯಲಿ ಬರೆಯದ ನಿನ್ನ ಹೆಸರ
ಹೃದಯದಿ ನಾನೇ ಕೊರೆದಿರುವೆ

ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ
ಹಾಗೆ ಸುಮ್ಮನೆ…

ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು…
ಮಾಯದ ಲೋಕದಿಂದ
ನನಗಾಗೆ ಬಂದವಳೆಂದು

ಆಹಾ ಎಂತ ಮಧುರ ಯಾತನೆ…
ಕೊಲ್ಲು ಹುಡುಗಿ ಒಮ್ಮೆ ನನ್ನ
ಹಾಗೆ ಸುಮ್ಮನೆ…
ಅನಿಸುತಿದೆ ಯಾಕೋ ಇಂದು

Anisuthide Yako Indu Song Lyrics in English

Anisuthide Yako Indu
Neenene Nannavalendu
Maayada Lokadinda
Nanagage Bandavalendu

Aha Entha Madhura Yathane
Kollu Hudugi Omme Nanna
Haage Summane
Aniuthide Yako Indu

Suriyuva Soneyu
Sooside Ninnade Parimala
Inyara Kanasalu
Neenu Hodare Thalamala
Poorna Chandira Raja Haakida
Ninnaya Mogavanu Kanda Kshana

Naa Khaidi Neene Seremane
Thabbi Nanna Appiko Omme…
Haage Summane…
Anisuthide Yaako Indu…

Thutigala Hoovali
Aadada Maathina Sihiyide
Manasina Putadali
Kevala Ninnade Sahiyide
Haneyali Bareyada Ninna Hesara
Hrudayadi Naane Korediruve

Ninagunte Idara Kalpane
Nanna Hesara Kooge Omme
Haage Summane…

Anisuthide Yaako Indu
Neenene Nannavalendu
Maayada Lokadinda
Nanagage Bandavalendu

Aha Entha Madhura Yathane
Kollu Hudugi Omme Nanna
Haage Summane
Aniuthide Yako Indu

Song Details :

  • Song Name : Anisuthide Yako Indu
  • Movie Name : Mungaru Male
  • Released On : 29 December 2006
  • Cast : Goldenstar Ganesh, Pooja Gandhi, Anantnag, Diganth
  • Music : Mano Murthu
  • Singer : Sonu Nigam
  • Lyricist : Jayanth Kaikini
  • Producer : E.Krishnappa
  • Director : Yograj Bhat
  • Music Label / Credits : Anand Audio

LEAVE A REPLY

Please enter your comment!
Please enter your name here