Home Lyrics Bisilu Thagi Manju Karagi Song Lyrics in Kannada – Savaari

Bisilu Thagi Manju Karagi Song Lyrics in Kannada – Savaari

47
1

ರಘು ಮುಖರ್ಜಿ, ಶ್ರೀನಗರ ಕಿಟ್ಟಿ & ಕಮಲಿನಿ ಮುಖರ್ಜಿ ನಟಿಸಿರುವ ಸವಾರಿ ಚಿತ್ರದ ಈ ಹಾಡನ್ನು ಸುಧೀರ್‌ ಅತ್ತಾವರ್‌ ಬರೆದಿದ್ದು ರಾಹುಲ್‌ ನಂಬಿಯಾರ್ ಹಾಡಿದ್ದಾರೆ, ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ, ಗೆಳೆಯರಿಬ್ಬರು ಗಾಡಿಯಲ್ಲಿ ತಮ್ಮ ಗಮ್ಯಕ್ಕಾಗಿ ಹೋಗುವಾಗ ಈ ಹಾಡು ಬರುತ್ತದೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Savaari :

  • ಹಾಡು : ಬಿಸಿಲು ತಾಗಿ ಮಂಜು ಕರಗಿ
  • ಸಂಗೀತ : ಮಣಿಕಾಂತ್‌ ಕದ್ರಿ
  • ಗಾಯನ : ರಾಹುಲ್‌ ನಂಬಿಯಾರ್
  • ಸಾಹಿತ್ಯ : ಸುಧೀರ್‌ ಅತ್ತಾವರ್

Bisilu Thagi Manju Karagi Song Lyrics in Kannada

ಬಿಸಿಲು ತಾಗಿ ಮಂಜು ಕರಗಿ
ಹರಿದು ನೀರು ನದಿಯ ಸೇರಿ
ಸ್ನೇಹ ಅರಳಿ ಭೇದ ಕರಗಿ
ಹರಿದು ಪ್ರೀತಿ ಎದೆಯ ಸೇರಿ
ನಗಿಸಿ ಅಳಿಸಿ ರಮಿಸಿ ಮುನಿಸಿ
ಸಲುಗೆ ಸ್ನೇಹ ಮೌನರಾಗ
ಇದೆಂತಾ ಹೊಸ ಮೈತ್ರಿಯೋ
ಹೊಸ ಚೈತ್ರವೋ ನವ ಚೈತನ್ಯವೋ
ಇದೆಂತಾ ಹೊಸ ದೃಷ್ಠಿಯೋ
ಹೊಸ ಸೃಷ್ಠಿಯೋ ನವ ಸೃಷ್ಠಿ ಇದೋ
ಬಿಸಲು ತಾಗಿ ಮಂಜು ಕರಗಿ
ಹರಿದು ನೀರು ನದಿಯ ಸೇರಿ
ಸ್ನೇಹ ಅರಳಿ ಭೇದ ಕರಗಿ
ಹರಿದು ಪ್ರೀತಿ ಎದೆಯ ಸೇರಿ
ನಗಿಸಿ ಅಳಿಸಿ ರಮಿಸಿ ಮುನಿಸಿ
ಸಲುಗೆ ಸ್ನೇಹ ಮೌನರಾಗ

ಬಾಳಿನ ತುಂಬ ಗೊಜಲುಗಳು
ಬಿಡಿಸಲು ನೂರು ಮಜಲುಗಳು
ಬಿರಿಯುವ ಸ್ಫೂರ್ತಿ ಬೇಕಿರಲು…
ತೇಲುವಾ ಮೋಡದೆಡೆಯಲ್ಲಿ
ಇಣುಕುವ ಕಿರಣಗಳೆಡೆಯಲ್ಲಿ
ಭರವಸೆ ಬೇಕು ಬದುಕಿನಲಿ
ಪ್ರಪಂಚ ಇಲ್ಲೊಂದು ಮಾರುಕಟ್ಟೆ
ಸಿಗುತ್ತೆ ಎಲ್ಲಾನು ಸಿಕ್ಕಾಪಟ್ಟೆ
ತಾಯಿ ಮಮತೆಯನ್ನೊಂದು ಬಿಟ್ರೆ
ಕಾಲ ಬುಡಕ್ಕೆಲ್ಲ ಕಾಸು ಕೊಟ್ರೆ
ಬದುಕೋ ಪಾಠ ಅರಿತು ಬೆರೆತು
ಕಲೆತು ಕೆದಕೋ ಚಪಲಾ ಮರೆತು
ಎಸಗೋ ಒಳಿತಾ ಅಮಿತಾ ಮಿಡಿತಾ
ಪ್ರೀತಿ ಬೆಸೆದು ಹೊಸೆದೂ ಸೆಳೆದೂ
ಇದೆಂತಾ ಹೊಸ ಮೈತ್ರಿಯೋ
ಹೊಸ ಚೈತ್ರವೋ ನವ ಚೈತನ್ಯವೋ
ಇದೆಂತಾ ಹೊಸ ದೃಷ್ಠಿಯೋ
ಹೊಸ ಸೃಷ್ಠಿಯೋ ನವ ಸೃಷ್ಠಿ ಇದೋ

ಬದುಕಿನ ಪಯಣ ಮುಗಿದಿರಲು
ಅದಲಿ ಇಹ ದೂರ ಸರಿದಿರಲು
ನೆನಪಿನಲಿ ಒಳ್ಳೆತನ ಎಂದೂ
ಹೊಸದು ಋತು ಮರಳಿ ಬರುತಿರಲು
ಬರಡು ಮರ ಮತ್ತೆ ಚಿಗುರಿರಲು
ನಮಗೆ ಏಕಿಲ್ಲಾ ಋತು ಜನನಾ…
ಜಗತ್ತೇ ಇದೊಂದು ರಂಗಭೂಮಿ
ಎಲ್ಲಾರು ಇದರ ಪಾತ್ರಗಳು
ಗಗನಭುವಿಯಂತೆ ಪ್ರೀತಿ ಅಮರ
ಕದನ ಕ್ರೂರ ಸಾರಿ ತಿಳಿಸು
ಚಿಂತೆ ಯಾಕೆ ದಹಿಸು ಮನದಿ
ನೀ ನಿಶ್ಚಿಂತೆಯಾಗಿ ಬಾಳು
ಗೋರಿಯಾಗಿ ಒಳಗೆ ಉಳಿದ ನೆನಪು
ಸೋರಿ ತನನಂ ಅರಳಿ….

ತಾರರರರೇ ತಾರರರರೇ ತಾರರರರೇ ರಾರಾರರೇ
ತಾರರರರೇ ತಾರರರರೇ ತಾರರೇ ತಾರಾರರರೇ
ತಾರರರರೇ ತಾರರರರೇ ತಾರರೇ ತಾರಾರರರೇ….

Bisilu Thagi Manju Karagi Song Lyrics in English

Bisilu Thaagi Manju Karagi
Haridu Neeru Nadiya Seri
Sneha Arali Bhedha Karagi
Haridu Preethi Edeya Seri
Nagisi Alisi Ramisi Munisi
Saluge Sneha Mouna Raaga
Identha Hosa Mythriyo
Hosa Chaithanyavo Nava Chaithanyavo
Identha Hosa Drushtiyo
Hosa Srushtiyo Nava Srushti Ido
Bisilu Thaagi Manju Karagi
Haridu Neeru Nadiya Seri
Sneha Arali Bhedha Karagi
Haridu Preethi Edeya Seri
Nagisi Alisi Ramisi Munisi
Saluge Sneha Mouna Raaga

Baalina thumba Gojalugalu
Bidisalu Nooru Majalugalu
Biriyuva Spoorthi Bekiralu…
Theluvaa Modadedeyalli
Bharavase Beku Badukinali
Prapancha Illondu Maarukatte
Siguthe Ellanu Sikkapatte
Thaayi Mamatheyannondu Bitre
Kaala Budakkella Kaasu Kotre
Baduko Paata Arithu Berethu
Esago Olitha Amitha Miditha
Preethi Besedu Hosedu Seledu
Identha Hosa Mythriyo
Hosa Chaithravo Nava Chaithanyavo
Identha Hosa Drushtiyo
Hosa Srushtiyo Nava Srushti Ido

Badukina Payana Mugidiralu
Adali Iha Doora Saridiralu
Nenapinali Ollethana Endu
Hosadu Ruthu Marali Baruthiralu
Baradu Mara Mathe Chiguriralu
Namage Ekilla Ruthu Janana
Jagathe Idondu Rangabhumi
Ellaru Idara Paathragalu
Gaganabhuviyanthe Preethi Amara
Kadana Krura Saari Thilisu
Chinthe Yaake Dahisu Manadi
Nee Nischintheyagi Baalu
Goriyaagi Olage Ulida Nenapu
Sori Thananam Arali….

Thaarararare Thaarararare Thaarararare Raaraarare
Thaarararare Thaarararare Tharare Thaaraararare
Thaarararare Thaarararare Tharare Thaaraararare….

Song Details :

  • Song Name : Bisilu Thagi Manju Karagi
  • Movie Name : Savaari
  • Released On : 10 April 2009
  • Cast : Raghu Mukharji, Kamalini Mukharji, Loose Maada
  • Music : Manikanth Kadri
  • Singers : Rahul Nambiyar
  • Lyricist : Sudhir Athavar
  • Director : Jacob Varghese
  • Producer : Ramoji Rao
  • Audio Label Credits : Anand Audio

1 COMMENT

LEAVE A REPLY

Please enter your comment!
Please enter your name here