Home Lyrics Kannada Chendutiya Pakkadali Song Lyrics in Kannada – Drama

Chendutiya Pakkadali Song Lyrics in Kannada – Drama

61
0
Chendutiya Pakkadali Song Kannada Lyrics

ರಾಕಿಂಗ್‌ಸ್ಟಾರ್‌ ಯಶ್‌, ‌ರೆಬಲ್‌ಸ್ಟಾರ್‌ ಅಂಬರೀಶ್‌, ರಾಧಿಕಾ ಪಂಡಿತ್‌, ಸತೀಶ್‌ ನೀನಾಸಂ, ಸಿಂಧು ಲೋಕನಾಥ್ ಹಾಗೂ ಇತರರು ನಟಿಸಿರುವ ಡ್ರಾಮಾ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the drama film starring Rockingstar Yash, Rebelstar Ambareesh, Radhika Pandit, Satish Ninasam, Sindhu Loknath and others is written by Jayant Kaykini, sung by Sonu Nigam, composed by V. Harikrishna, the audio rights of the film are owned by renowned audio company Anand Audio.

  • ಹಾಡು : ಚೆಂದುಟಿಯ ಪಕ್ಕದಲಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Chendutiya Pakkadali Song Lyrics in Kannada

ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡ್ಲಾ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ
ಅತಿ ತುಂಟ ಮಾತೊಂದ ನಾನಾಡ್ಲಾ
ಕಿಡಿಗೇಡಿ ಕನಸೊಂದ ಕಟ್ಟಿರ್ಲಾ
ತಡ ಮಾಡದೆ ಸಣ್ಣ ಮುತ್ತಿಡ್ಲಾ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ…
ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡ್ಲಾ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ
ಅತಿ ತುಂಟ ಮಾತೊಂದ ನಾನಾಡ್ಲಾ…

ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು
ಹಾಡಿ ನೋಡೆನ್ನನು ಸ್ಮೈಲಾದ್ರೂ ಬರಲಿ
ನಾಚಿಕೆಯ ನೆಪದಲ್ಲಿ ಓಡದಿರು ನನ್ನಿಂದ
ನೀ ಮುಡಿದ ಸಂಪಿಗೆಯ ಸ್ಮೆಲ್ಲಾದ್ರು ಸಿಗಲಿ
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ,
ಬೆನ್ನಿನಲಿ ಬೆವರಾಗಿ ನಾನಿರ್ಲಾ
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ…
ಚೆಂದುಟಿಯ ಪಕ್ಕದಲೀ….

ಒಮ್ಮೊಮ್ಮೆ ಯೋಚಿಸುವೆ ಯಾತಕ್ಕೆ ನಾನಾದೆ
ಎದೆಯೊಳಗೆ ಕುರ್ಚಿಯನು ಕೆತ್ತುವ ಬಡಗಿ
ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು
ಇನ್ನೆಷ್ಟು ಚಳಿಗಾಲ ಕಾಯೋದೆ ಹುಡುಗಿ
ಸ್ವಪ್ನಕ್ಕೆ ಬೆಡ್‌ಶೀಟು ಹೊಚ್ಚಿರ್ಲಾ
ಚಂದ್ರಂಗೆ ಮೊಂಬತ್ತಿ ಕೊಟ್ಟಿರ್ಲಾ…
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ…

ಬಿಗಿದಿಟ್ಟ ತಂಬೂರಿ ತಂತಿಯಂತಾಗಿರುವೆ
ತುಂಡು ಮಾಡೆನ್ನನು ಸೌಂಡಾದ್ರು ಬರಲಿ
ನಿನ್ನ ತಲೆ ದಿಂಬಿನ ಚಿತ್ತಾರವಾಗಿರುವೆ
ನಿನ್ನ ಕನವರಿಕೆಯಲಿ ಒಂದಾದ್ರೂ ಸಿಗಲಿ…
ಸಿಗದಂತ ಕೊನೆ ಸಾಲು ಬಿಟ್ಟಿರ್ಲಾ
ಯಾವ್ದಕ್ಕೂ ಕೊನೆಗೊಂದು ಡಾಟಿಡ್ಲಾ…
ಓ… ಇದು ಯಾವ್ದೂ ಹೇಳ್ದೇನೆ ಮುಚ್ಚಿಡ್ಲಾ….

ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು
ಗುರಿಯಿಟ್ಟು ಕಾಡಿಗೆಯ ಬೊಟ್ಟಿಡ್ಲಾ
ಒಂದೊಳ್ಳೆ ಬೈಗುಳವ ನೀ ನುಡಿಯುವ ಹಾಗೆ
ಅತಿ ತುಂಟ ಮಾತೊಂದ ನಾನಾಡ್ಲಾ….

Chendutiya Pakkadali Song Lyrics in English

Chendutiya Pakkadali Thumba Hatthira Ninthu
Guriyittu Kaadigeya Bottidlaa
Ondolle Baigulava Nee Nudiyuva Haage
Athi Thunta Maathonda Naanadlaa
Kidigedi Kanasonda Kattirlaa
Thada Maadade Sanna Mutthidlaa
Idu Yaavdu Heldene Mucchidlaa…
Chendutiya Pakkadali Thumba Hatthira Ninthu
Guriyittu Kaadigeya Bottidlaa
Ondolle Baigulava Nee Nudiyuva Haage
Athi Thunta Maathonda Naanadlaa…

Ee Ninna Haadina Poli Swaravaaguvenu
Haadi Nodennanu Smailaadru Barali
Naachikeya Nepadalli Odadiru Nanninda
Nee Mudida Sampigeya Smellaadru Sigali
Kenneyali Kempaagi Ulidirlaa,
Benninali Bevaraagi Naanirlaa
Idu Yaavdu Heldene Mucchidlaa…
Chendutiya Pakkadali….

Ommomme Yochisuve Yaathakke Naanade
Edeyolage Kurchiyanu Ketthuvaa Badagi
Ibbaniyu Suduthihudu Thangaali Naguthihudu
Inneshtu Chaligaala Kaayode Hudugi
Swapnakke Bedsheetu Hocchirlaa
Chandrange Mombatthi Kottirlaa…
Idu Yaavdu Heldene Mucchidlaa…

Bigiditta Thamboori Thanthiyanthagiruve
Thundu Maadennanu Soundaadru Barali
Ninna Thale Dimbina Chittharavagiruve
Ninna Kanavarikeyali Ondaadru Sigali
Sigadantha Kone Saalu Bittirlaa…
Yaavdakku Konegondu Daatidlaa…
Oh… Idu Yaavdu Heldene Mucchidlaa…

Chendutiya Pakkadali Thumba Hatthira Ninthu
Guriyittu Kaadigeya Bottidlaa
Ondolle Baigulava Nee Nudiyuva Haage
Athi Thunta Maathonda Naanadlaa…

Song Details :

  • Song Name : Chendutiya Pakkadali
  • Movie Name : Drama
  • Released on : 23 November 2012
  • Cast : Rockingstar Yash, Rebelstar Ambareesh, Radhika Pandit, Satish Ninasam, Sindhu Loknath
  • Music : V.Harikrishna
  • Singer : Sonu Nigam
  • Lyricist : Jayanth Kaikini
  • Director : Yograj Bhat
  • Producer : Jayanna, N.Bhogendra
  • Audio Label : Anand Audio

LEAVE A REPLY

Please enter your comment!
Please enter your name here