Home Lyrics Huttidare Kannada Nadal Huttabeku Song Lyrics in Kannada – Akasmika

Huttidare Kannada Nadal Huttabeku Song Lyrics in Kannada – Akasmika

38
0
Huttidare Kannada Nadal Huttabeku Song Kannada Lyrics

ನಟಸಾರ್ವಬೌಮ ಡಾ.ರಾಜ್‌ಕುಮಾರ್‌, ಜಯಪ್ರದಾ ನಟಿಸಿರುವ ಶಬ್ಧವೇದಿ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಸ್ವತಃ ಡಾ.ರಾಜ್‌ಕುಮಾರ್‌ ಈ ಹಾಡನ್ನು ಹಾಡಿದ್ದಾರೆ, ಕನ್ನಡ ಭಾಷೆಯ ಹಿಂಪನ್ನು ಮಹತ್ವವನ್ನು ಸಾರಿ ಹೇಳುವ ಹಾಡು. ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆಕಾಶ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಹುಟ್ಟಿದರೆ ಕನ್ನಡ ನಾಡಲ್‌ ಹುಟ್ಟಬೇಕು
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಡಾ.ರಾಜ್‌ಕುಮಾರ್

Huttidare Kannada Nadal Huttabeku Song Lyrics in Kannada

ಹೇ ಹೇ ಬಾಜೋ ತಾನಟಕಟಕಟ ತಾನಟಕಟಕಟ ಹೇ ಹೇ…
ಹುಟ್ಟಿದರೆ ಕನ್ನಡ ನಾಡಲ್‌ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣನ್‌ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕಾ ಬಂಡಿ ವಿಧಿ ಅಲೆದಾಡಿಸುವ ಬಂಡಿ
ಹುಟ್ಟಿದರೆ ಕನ್ನಡ ನಾಡಲ್‌ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣನ್‌ ಮೆಟ್ಟಬೇಕು

ಕಾಶೀಲಿ ಸ್ನಾನ ಮಾಡು ಕಾಶ್ಮೀರ ಸುತ್ತಿ ನೋಡು
ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತ ಎಲ್ಹೋರನ ಬಾಳಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚೆಂದಾನ ತೂಕ ಮಾಡು
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ
ಕನ್ನಡ… ಕನ್ನಡ… ಕಸ್ತೂರಿ ಕನ್ನಡ
||ಹುಟ್ಟಿದರೆ ಕನ್ನಡ…. ವಿಧಿ ಗುರಿ ತೋರಿಸುವಾ ಬಂಡಿ||

ಧ್ಯಾನಕ್ಕೆ ಭೂಮಿ ಇದು ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು ನಾದಾಂತರಂಗವಿದು
ಕುವೆಂಪು ಬೇಂದ್ರೆಯಿಂದ ಕಾರಂತ ಮಾಸ್ತಿಯಿಂದ
ಧನ್ಯವೀ… ಕನ್ನಡ… ಗೋಕಾಕಿನ ಕನ್ನಡ….
||ಹುಟ್ಟಿದರೆ ಕನ್ನಡ…. ವಿಧಿ ದಡ ಸೇರಿಸುವಾ ಬಂಡಿ||

ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು
ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ
ಇಲ್ಲಿಯೇ… ಇಲ್ಲಿಯೇ… ಎಂದಿಗೂ ನಾನಿಲ್ಲಿಯೇ
||ಹುಟ್ಟಿದರೆ ಕನ್ನಡ…. ವಿಧಿ ದಡ ಸೇರಿಸುವಾ ಬಂಡಿ||
ಆ…. ಆ…. ಆ…. ಆ…. ಆ…. ಆ…..

Huttidare Kannada Nadal Huttabeku Song Lyrics in English

Hey Hey Baajo Thaanatakatakata Thaanatakatakata Hey Hey…
Huttidare Kannada Nadal Huttabeku
Mettidare Kannada Mannan Mettabeku
Badukidu Jataka Bandi Idu Vidhi Odisuva Bandi
Badukidu Jataka Bandi Vidhi Aledaadisuva Bandi
Huttidare Kannada Nadal Huttabeku
Mettidare Kannada Mannan Mettabeku

Kashili Snaana Maadu Kashmira Suthi Nodu
Jogada Gundi Odeya Naanendu Koogi Haadu
Ajantha Ellorhana Baalali Omme Nodu
Badami Aiholeya Chandana Thooka Maadu
Kaliyoke Koti Bhashe Aadoke Onde Bhashe
Kannada… Kannada… Kasthuri Kannada
||Huttidare Kannada… Vidhi Guri Thorisuva Bandi||

Dhyanakke Bhoomi Idu Premakke Swarga Idu
Snehakke Shaale Idu Shilpakke Thalpa Idu
Natyakke Naadi Idu Naadantharangavidu
Kuvempu Bendreyinda Karantha Masthiyinda
Dhanyavi… Kannada… Gokakina Kannada….
||Huttidare Kannada… Vidhi Dada Serisuva Bandi||

Baalina Bennu Hathi Nooraru Ooru Suthi
Eneno Kanda Melu Nammure Namage Melu
Kailasam Kanda Namage Kailasa Yaake Beku
Daasara Kanda Namage Vaikunta Yaake Beku
Mundina Nanna Janma Baredittananthe Bramha
Illiye… Illiye… Endigu Naanilliye
||Huttidare Kannada… Vidhi Dada Serisuva Bandi||
Aa…. Aa…. Aa…. Aa…. Aa…. Aa….

Song Details :

  • Song Name : Huttidare Kannada Nadal Hutabeku
  • Movie Name : Akasmika
  • Released On : 16th April 1993
  • Cast : Dr.Rajkumar, Jayaprada
  • Music : Hamsalekha
  • Lyrics : Hamsalekha
  • Singer : Dr.Rajkumar
  • Director : T.S.Nagabharana
  • Producer : S.A.Govindaraj
  • Music Label : Akash Audio

LEAVE A REPLY

Please enter your comment!
Please enter your name here