Home Lyrics Jeevavannu Belagoke Song Lyrics in Kannada – Bad Manners

Jeevavannu Belagoke Song Lyrics in Kannada – Bad Manners

94
2
Jeevavannu Song Kannada Lyrics

ಯಂಗ್ ರೆಬಲ್‌ಸ್ಟಾರ್‌ ಅಭಿಷೇಕ್‌ ಅಂಬರೀಶ್‌ & ರಚಿತಾ ರಾಮ್‌ ನಟಿಸಿರುವ ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ, ಸಿದ್ಧಾಂತ್‌ ಸುಂದರ್‌, ಚರಣ್‌ ರಾಜ್ ಹಾಡಿದ್ದಾರೆ, ದುನಿಯಾ ಸೂರಿ ನಿರ್ದೇಶನ ಮಾಡಿದ್ದು ಕೆ.ಎಂ.ಸುಧೀರ್‌ ನಿರ್ಮಾಣ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Bad Manners

  • ಹಾಡು : ಜೀವವನ್ನು ಬೆಳಗೋಕೆ
  • ಸಂಗೀತ : ಚರಣ್‌ರಾಜ್‌
  • ಗಾಯನ : ಸಿದ್ಧಾಂತ್‌ಸುಂದರ್‌, ಚರಣ್‌ರಾಜ್
  • ಸಾಹಿತ್ಯ : ಜಯಂತ್‌ಕಾಯ್ಕಿಣಿ

Jeevavannu Belagoke Song Lyrics in Kannada

ಜೀವವನ್ನು ಬೆಳಗೋಕೆ
ಬೇಕೊಂದು ಕಿಡಿ
ನೋವನ್ನೆಲ್ಲ ಅಳಿಸೋಕೆ
ಸಾಕೊಂದೇ ನುಡಿ

ಬೇರು ಬಿಟ್ಟು ನಿಲ್ಲೋಕೆ
ಬೇಕೊಂದು ನೆಲ
ಎಲ್ಲಾ ತಿದ್ದಿ ಬರೆಯೋಕೆ
ಸಾಕೊಂದೇ ಛಲಾ

ಛಲಾ
ಛಲಾ
ಛಲಾ

ಖಾಲಿ ಇದೆ
ಪದಬಂಧ ನಿನಗಾಗಿ
ಕಾಯುತಿದೆ
ತಿರುವೊಂದು ಕತೆಗಾಗಿ

ಜಾಗರದಾ ರಾತ್ರಿಯಲಿ ಅಲೆದು
ಮುಚ್ಚಿರುವಾ ಪೇಟೆಯಲಿ ಕುಣಿದು
ಗೋಡೆಗಳ ಮೌನವನು ಮುರಿದು
ಲೆಕ್ಕಾ ಬೇಗ ಚುಕ್ತಾ ಮಾಡು

ಓದದೆಯೆ ಪತ್ರಗಳಾ ಹರಿದು
ಬೀದಿಯಲಿ ಚಿತ್ರಗಳಾ ಬರೆದು
ಉಕ್ಕಿ ಬರೋ ಮೋಡಗಳಾ ತಡೆದು
ಲೆಕ್ಕಾ ಬೇಗ ಚುಕ್ತಾ ಮಾಡು

ಓ ಸಮಯಾ ಹೇಳು ನೀನೇ
ಸರಿ ಎಂದರೇನು ತಪ್ಪೆಂದರೇನು
ನಡುವೆ ಗೆರೆ ಉಂಟೇನು

ತಡವಿಲ್ಲ ತಡವಿಲ್ಲ ತಡವಿಲ್ಲ
ಬಿರಿಯೋಕೆ ಮುಗಿಲು

ತಡವಿಲ್ಲ ತಡವಿಲ್ಲ ತಡವಿಲ್ಲ
ಬಿಸಿಲೊಂದು ಬರಲು

ತಡವಿಲ್ಲ ತಡವಿಲ್ಲ ತಡವಿಲ್ಲ
ಹಸಿವಲ್ಲೂ ನಗಲು

ತಡವಿಲ್ಲ ತಡವಿಲ್ಲ ತಡವಿಲ್ಲ
ಕಳೆದದ್ದು ಸಿಗಲು

ಖಾಲಿ ಇದೆ
ಪದಬಂಧ ನಿನಗಾಗಿ
ಕಾಯುತಿದೆ
ತಿರುವೊಂದು ಕತೆಗಾಗಿ

Jeevavannu Belagoke Song Lyrics in English

Jeevavannu Belagoke
Bekondu Kidi
Novannella Alisoke
Saakonde Nudi

Beru Bittu Nilloke
Bekondu Nela
Ella Thiddi Bareyoke
Saakonde Chala

Chalaa
Chalaa
Chalaa

Khali Ide
Padabandha Ninagaagi
Kaayuthide
Thiruvondu Kathegaagi

Jaagarada Raathriyali Aledu
Mucchiruvaa Peteyali Kunidu
Godegala Mounavanu Muridu
Lekka Bega Chuktha Maadu

Odadeye Pathragala Haridu
Beediyali Chithragala Baredu
Ukki Baro Modagala Thadedu
Lekka Bega Chuktha Maadu

O Samaya Helu Neene
Sari Endarenu Thappendarenu
Naduve Gere Untenu

Thadavilla Thadavilla Thadavilla
Biriyoke Mugilu

Thadavilla Thadavilla Thadavilla
Bisilondu Baralu

Thadavilla Thadavilla Thadavilla
Hasivallu Nagalu

Thadavilla Thadavilla Thadavilla
Kaledaddu Sigalu

Khali Ide
Padabandha Ninagaagi
Kaayuthide
Thiruvondu Kathegaagi

Song Details :

  • Song Name : Jeevavannu Belagoke
  • Movie Name : Bad Manner’s
  • Cast : Abhishek Ambareesh, Rachitha Ram, Sharath Lohithashwa
  • Releasing On : 2023
  • Music : Charan Raj
  • Singer : Siddhanth Sundar, Charan Raj
  • Lyricist : Jayanth Kaikini
  • Director : Suri
  • Producer : K.M.Sudhir
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here