Home Singers K.S.Chitra Jenina Goodu Navella Song Lyrics in Kannada – Habba

Jenina Goodu Navella Song Lyrics in Kannada – Habba

69
1
Jenina Goodu Naavella Song Kannada Lyrics

ಸಾಹಸಸಿಂಹ ಡಾ.ವಿಷ್ಣುವರ್ಧನ್‌, ರೆಬಲ್‌ಸ್ಟಾರ್‌ ಅಂಬರೀಶ್‌, ದೇವರಾಜ್‌, ಶಶಿಕುಮಾರ್‌, ರಾಮ್‌ಕುಮಾರ್‌, ಜಯಪ್ರದ, ಊರ್ವಶಿ, ಚಾರುಲತಾ ಅಭಿನಯದ ಹಬ್ಬ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ & ಕೋರಸ್‌ ಹಾಡಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Habba Sarring Sahasa Simha Dr.Vishnuvardhan, Rebelstar Ambarish, Devaraj, Shashikumar, Ramkumar, Jayaprada, Urvashi, Charulatha, written & Music Composed by Veteran Music Director Hamsalekha, Sung By Rajesh Krishnan, K.S.Chitra & Chorus, The Audio Rights of the movie are owned by renowned Audio Company Anand Audio.

Other Songs from Habba :

  • ಹಾಡು : ಜೇನಿನ ಗೂಡು ನಾವೆಲ್ಲಾ
  • ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ, ಕೋರಸ್ ಸಾಹಿತ್ಯ : ಹಂಸಲೇಖ

Jenina Goodu Navella Song Lyrics in Kannada

ಓ ಓ ಓ ಓ ಓ ಓ ಓ ಓ
ಓ ಓ ಓ ಓ ಓ ಓ ಓ ಓ
ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ
ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ

ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ
ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ

ಮನಗಳು ಸೇರಿದರೇ
ತುಂಬಿದ ಮನೆಯಂತೇ
ಮನಗಳು ಸೇರಿದರೇ
ತುಂಬಿದ ಮನೆಯಂತೇ
ತುಂಬಿದ ಮನೆಯವನೇ
ಧರೆಯಲಿ ನಗುವಿನ ದೊರೆಯಂತೇ

ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ
ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ

ಬದುಕಿನಾ ಬೆಂಡಿಗೆ ಅಂಟಿರೋ
ಜೋಳದಾ ಕಾಳುಗಳಾ ನೋಡೋ, ಹೌದಪ್ಪಾ
ಸಿಪ್ಪೆಯಾ ಸೂರಿನಲ್ಲಿ ಸಹಜೀವನ ಮಾಡೋ
ಅವರೇ ಕಾಳುಗಳಾ ನೋಡು ಶಹಬ್ಬಾಸ್‌
ಭೂಮಿಗೆ ಒಟ್ಟಿಗೆ ಬಂದು
ಬೆಂದರೆ ಒಟ್ಟಿಗೆ ಬೆಂದು, ಆಹಾ
ಬಾಳೋ ದವಸದಂತೆ ನಾವೂ ಊಊ, ಅದಪ್ಪಾ
ಬಾಳೆಯಂತೆ ಹಲಸಿನಂತೆ ದಾಳಿಂಬೆಯಂತೆ
ನಾವು, ವಾರೆ ವಾಹ್‌
ಒಗ್ಗಟ್ಟೇ ಸೃಷ್ಟಿಯ ನಿಯಮಾ….

ರುಸಿಗಳು ಸೇರಿದರೆ
ಅಭಿರುಚಿ ಇದೆಯಂತೆ
ರುಸಿಗಳು ಸೇರಿದರೆ
ಅಭಿರುಚಿ ಇದೆಯಂತೆ
ಅಭಿರುಚಿ ಬೆಳೆದವನೇ
ಬಾಳಿನ ಅಡುಗೆಯ ದೊರೆಯಂತೆ

ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ
ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ

ಕಹಿಯನ್ನೆಲ್ಲಾ ಮರೆಯಬೇಕಯಾ
ಅದ ಮರೆಯೋದಕ್ಕೂ ಮರೆವು ಬೇಕಯಾ
ಮರೆಯೋ ವರವೇ ಇಲ್ಲದಿದ್ದರೆ
ಮನಸೇ ಕುಡಿದಾ ಮಂಗನಂತಯಾ
ಕೆದಕಿ ಕೆದಕಿ ಕೆದಕಿ ಕೆದಕಿ
ದ್ವೇಷ ಬರಿಸುವುದಂತಯ್ಯಾ
ಮನಸ್ಸು ಮುರಿದು ಹೋಗಲು ಕಹಿಯೇ ಮೂಲವಯ್ಯಾ
ತುಂಬಿದ ಮನೆಯು ಒಡೆದು ಹೋಗಲು
ಕಹಿ ನೆನಪೇ ನೆಪವಯ್ಯಾ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೆ
ಮರೆವಿನ ಮರೆಯಲ್ಲೇ ಕ್ಷಮೆಯು ಇದೆಯಂತೆ
ಕ್ಷಮಿಸಲು ಕಲಿತವನೇ ಕಹಿಯನು ಸಿಹಿ ಎನ್ನುವನಂತೆ

ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ
ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ

ಮನೆಯೇ ನಮ್ಮ ಜೀವಾ, ಗುರುಹಿರಿಯರೆನ್ನ ದೈವಾ
ದೈವ ಪಾದಗಳಿಗೆ ನಮ್ಮ ಪ್ರೀತಿಯೆಂಬ ಹೂವಾ
ಹಳೆಯ ಬೇರಿನ ಮಡಿಲಲ್ಲಿ
ಹೊಸ ಚಿಗುರೊಡೆವಂತೆ
ನಡೆಯಬೇಕು ಎಲ್ಲಾ ಕಿರಿಯರು
ಹಿರಿಯರು ಹೇಳಿದ ನುಡಿಯಂತೆ
ಉಲ್ಲಾಸ ಉಲ್ಲಾಸ ಹಿರಿಯರ ನೆರಳಲಿ ವಿಕಾಸ

ಮನಗಳು ಸೇರಿದರೇ
ತುಂಬಿದ ಮನೆಯಂತೇ
ಮನಗಳು ಸೇರಿದರೇ
ತುಂಬಿದ ಮನೆಯಂತೇ
ತುಂಬಿದ ಮನೆಯವನೇ
ಧರೆಯಲಿ ನಗುವಿನ ದೊರೆಯಂತೇ
ಪ್ರೀತಿಯ ಗೂಡು ನಾವೆಲ್ಲಾ
ಬೇರೆ ಆದರೆ ಒಲವಿಲ್ಲಾ

ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ
ಜೇನಿನ ಗೂಡು ನಾವೆಲ್ಲಾ
ಬೇರೆ ಆದರೆ ಜೇನಿಲ್ಲಾ

Jenina Goodu Navella Song Lyrics in English

O o o o o o o o
O o o o o o o o
Jenina Goodu Navellaa
Bere Aadare Jenillaa
Jenina Goodu Navellaa
Bere Aadare Jenillaa

Jenina Goodu Navellaa
Bere Aadare Jenillaa
Jenina Goodu Navellaa
Bere Aadare Jenillaa

Managalu Seridare Thumbida Maneyanthe
Managalu Seridare Thumbida Maneyanthe
Thumbida Maneyavane Dhreyali Naguvina Doreyanthe

Jenina Goodu Navellaa
Bere Aadare Jenillaa
Jenina Goodu Navellaa
Bere Aadare Jenillaa

Badukinaa Bendige Antiro
Jolada Kaalugalaa Nodo, Howdappaa
Sippeyaa Soorinalli Sahajeevana Maado
Avare Kaalugalaa Nodu, Shahabbaas
Bhoomige Ottige Bandu
Bendare Ottige Bendu, Ahaa
Baalo Davasadanthe Naavoo Uoo uoo, Adappaa
Baleyanthe Halasinanthe Daalimbeyanthe
Naavu, Vaarewah
Oggatte Srushti Niyamaa….

Ruchigalu Seridare
Abhiruchi Ideyanthe
Ruchigalu Seridare
Abhiruchi Ideyanthe
Abhiruchi Beladavane
Baalina Adugeya Doreyanthe

Jenina Goodu Navellaa
Bere Aadare Jenillaa
Jenina Goodu Navellaa
Bere Aadare Jenillaa

Kahiyannellaa Mareyabekayaa
Ada Mareyodakku Marevu Bekayaa

Mareyo Varave Illadiddare
Manasse Kudidaa Mangananthayaa
Kedaki Kedaki, Kedaki Kedaki
Dwesha Barisuvudanthayyaa
Manassu Mudiru Hogalu Kahiye Moolavayyaa
Thumbida Maneyu Odedu Hogalu
Kahi Nenape Nepavayyaa
Marevina Mareyalle Kshameyu Ideyanthe
Marevina Mareyalle Kshameyu Ideyanthe
Kshamisalu Kalitavane Kahiyanu Sihi Ennuvanthe

Jenina Goodu Navellaa
Bere Aadare Jenillaa
Jenina Goodu Navellaa
Bere Aadare Jenillaa

Maneye Namma Jeevaa, Guruhiriyarenna Daivaa
Daiva Paadagalige Namma Preethiyemba Hoovaa
Haleya Berina Madilalli
Hosa Chigurugalu Chigurodevanthe
Nadeyabeku Ellaa Kiriyaru
Hiriyaru Helida Nudiyanthe
Ullaasa Ullaasa Hiriyara Neralali Vikaasa

Managalu Seridare
Thumbida Maneyanthe
Managalu Seridare
Thumbida Maneyanthe
Thumbida Maneyavane
Dhareyali Naguvina Doreyanthe
Preethiya Goodu Naavellaa
Bere Aadare Olavillaa
Jenina Goodu Navellaa
Bere Aadare Jenillaa
Jenina Goodu Navellaa
Bere Aadare Jenillaa

Song Details :

  • Song Name : Jenina Goodu Navella
  • Movie Name : Habba
  • Released On : 16 April 1999
  • Cast : Sahasa Simha Dr.Vishnuvardhan, Rebelstar Ambarish, Devaraj, Shashikumar, Ramkumar, Jayaprada, Urvashi, Charulatha
  • Music : Hamsalekha
  • Singers : Rajesh Krishnan, K.S.Chitra & Chorus
  • Lyrics : Hamsalekha
  • Producer : Nara Bharathidevi
  • Director : D.Rajendra Babu
  • Music Label Credits : Anand Audio

1 COMMENT

LEAVE A REPLY

Please enter your comment!
Please enter your name here