Home Lyrics Kanaso Idu Nananso Idu Song Lyrics in Kannada – Cheluvina Chitthara

Kanaso Idu Nananso Idu Song Lyrics in Kannada – Cheluvina Chitthara

61
3
Kanaso Idu Nanaso Idu Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌ ಮತ್ತು ಅಮೂಲ್ಯ ನಟಿಸಿರುವ ಚೆಲುವಿನ ಚಿತ್ತಾರ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕರಾದ ಎಸ್.ನಾರಾಯಣ್‌ ಬರೆದಿದ್ದು ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ, ಸೋನು ನಿಗಮ್‌, ಸುನಿಧಿ ಚೌಹಾಣ್ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Cheluvina Chitthara :

  • ಹಾಡು : ಕನಸೋ ಇದು ನನಸೋ ಇದು
  • ಸಂಗೀತ : ಮನೋ ಮೂರ್ತಿ
  • ಗಾಯನ : ಸೋನು ನಿಗಮ್‌, ಸುನಿಧಿ ಚೌಹಾಣ್ಸಾ
  • ಹಿತ್ಯ : ಎಸ್.ನಾರಾಯಣ್‌

Kanaso Idu Nananso Idu Song Lyrics in Kannada

ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ನಾ ನಿನ್ನಲಿ ನೀ ನನ್ನಲಿ
ಅಂದುಕೊಂಡರೆ ಎಂತಾ ರೋಮಾಂಚನ
ಅಂತರಂಗದಾ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವು
ಪ್ರೀತಿ ಜನಿಸುವಾ ಆ ಗರ್ಭಕೆ
ಕಣ್ಣ ಭಾಷೆಯು ಎಂತಾ ಆಹ್ಲಾದವೂ

ಕನಸೋ ಇದು ನನಸೋ ಇದು
ನನ್ನೆದೆಯಲಿ ಬಂದ ಪ್ರೇಮ ಸಿಂಚನ
ನಾ ನಿನ್ನಲಿ ನೀ ನನ್ನಲಿ
ಅಂದುಕೊಂಡರೆ ಎಂತಾ ರೋಮಾಂಚನ

ಪ್ರೀತಿ ನೀ ಹುಟ್ಟೋದೆಲ್ಲಿ ನಿನ್ನ ಆ ತವರೂರೆಲ್ಲಿ
ನಿಂಗೆ ತಾಯ್ತಂದೆ ಯಾರು ನೀ ಹೇಳೆಯಾ
ನಿನಗಿಂತಲೂ ರುಚಿ ಯಾವುದು
ನೀನಿದ್ದರೆ ಬೇರೆ ಬೇಕೆನಿಸದು
ಪ್ರೀತಿ ನಿಂಗಿಷ್ಟ ಯಾರು ನಿನ್ನ ಕೈಗೊಂಬೆ ಇವರು
ಇವರ ಆಸೆಯ ತುಂಬ ನೀ ಹರಿಯುವೆ
ನಿನ್ನ ಸ್ನೇಹವೇ ಬಲು ಸುಂದರ
ನೀನಿದ್ದರೆ ಇಲ್ಲಿ ಸುಖಸಾಗರ

ಕನಸೋ ಇದು ನನಸೋ ಇದು
ನನ್ನೆದೆಯಲಿ ಬಂದ ಪ್ರೇಮ ಸಿಂಚನ
ನಾ ನಿನ್ನಲಿ ನೀ ನನ್ನಲಿ
ಅಂದುಕೊಂಡರೆ ಎಂತಾ ರೋಮಾಂಚನ

ಪ್ರೀತಿ ಈ ಹೃದಯಗಳನ್ನು ನೀನು ಆವರಿಸಿಕೊಂಡೆ
ನಿನ್ನ ಇಷ್ಟಾನುಸಾರ ಕರೆದೊಯ್ಯುವೆ
ಇವರಿಬ್ಬರೂ ಮತಿಹೀನರು
ನಿನ್ನ ಮುಷ್ಟಿಗೆ ಇಲ್ಲಿ ಶರಣಾದರು
ಪ್ರೀತಿ ಈ ಸಂಭ್ರಮದಲ್ಲಿ ಇವರ ಈ ಸಂಗಮದಲ್ಲಿ
ಕಣ್ಣು ಕರೆಯೋಲೆಗಳಲ್ಲಿ ನೀನಿಲ್ಲವೇ
ನಿನಗಿಂತಲೂ ಹಿತ ಯಾವುದು
ನಿನ್ನಿಂದಲೇ ತಾನೆ ಜಗ ನಲಿವುದು

ಕನಸೋ ಇದು ನನಸೋ ಇದು
ನನ್ನೆದೆಯಲಿ ತಂದ ಮೊದಲ ಸಿಂಚನ
ಅಂತರಂಗದಾ ಆಹ್ವಾನವೇ
ಹೃದಯ ಮೀಟುವಾ ಶುಭ ಆರಂಭವು
ಪ್ರೀತಿ ಜನಿಸುವಾ ಆ ಗರ್ಭಕೆ
ಕಣ್ಣ ಭಾಷೆಯು ಎಂತಾ ಆಹ್ಲಾದವೂ

Kanaso Idu Nananso Idu Song Lyrics in English

Kanaso Idu Nanaso Idu
Nannedeyali Thanda Modala Sinchana
Naa Ninnali Nee Nannali
Andukondare Enthaa Romanchana
Antharangada Aahwanave
Hrudaya Meetuva Shubha Aarambhavu
Preethi Janisuvaa Aa Garbhake
Kanna Bhasheyu Entha Aahladavu

Kanaso Idu Nanaso Idu
Nannedeyali Banda Prema Sinchana
Naa Ninnali Nee Nannali
Andukondare Entha Romanchana

Preethi Nee Huttodelli Ninna Aa Thavaroorelli
Ninge Thaythande Yaaru Nee Heleyaa
Ninaginthaloo Ruchi Yaavudu
Neeniddare Bere Bekenisadu
Preethi Ningishta Yaaru Ninna Kaigombe Ivaru
Iavara Aaseya Thumba Nee Hariyuve
Ninna Snehave Balu Sundara
Neeniddare Illi Sukhasagara

Kanaso Idu Nanaso Idu
Nannedeyali Banda Prema Sinchana
Naa Ninnali Nee Nannali
Andukondare Enthaa Romanchana

Preethi Ee Hrudayagalannu Neenu Aavarisikonde
Ninna Ishtanusara Karedoyyuve
Ivaribbaru Mathihinaru
Nina Mushtige Sharanadaru
Preethi Ee Sambhramadalli Ivara Ee Sangamadalli
Kannu Kareyolegalalli Neenillave
Ninaginthalu Hitha Yaavudu
Ninnidale Thaane Jaga Nalivudu

Kanaso Idu Nanaso Idu
Nannedeyali Thanda Modala Sinchana
Antharangada Aahwanave
Hrudaya Meetuva Shubha Aarambhavu
Preethi Janisuvaa Aa Garbhake
Kanna Bhasheyu Enthaa Aahladavu

Song Details :

  • Song Name : Kanaso Idu Nanaso Idu
  • Movie Name : Cheluvina Chitthara
  • Cast : Goldenstar Ganesh, Amulya, Komal
  • Music : Mano Murthy
  • Singer : Sonu Nigam, Sunidhi Chowhan
  • Lyricist : S.Narayan
  • Director : S.Narayan
  • Producer : S.Narayan
  • Music Label Credits : Anand Audio

3 COMMENTS

LEAVE A REPLY

Please enter your comment!
Please enter your name here