Home Lyrics Kannada Khushiyali Khushiyali Song Lyrics in Kannada – Prince

Khushiyali Khushiyali Song Lyrics in Kannada – Prince

62
0
Khushiyali Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ಜೆನ್ನಿಫರ್‌ ಕೋತ್ವಾಲ್‌, ನಿಖಿತಾ ತುಕ್ರಾಲ್‌ ಅಭಿನಯದ ಪ್ರಿನ್ಸ್‌ ಚಿತ್ರದ ಈ ಹಾಡನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಬರೆದಿದ್ದು ಶಾನ್‌ & ರೀಟಾ ಹಾಡಿದ್ದಾರೆ, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ತನ್ನದಾಗಿಸಿಕೊಂಡಿದೆ.

This song from Challengingstar Darshan, Jennifer Kotwal, Nikhita Thukral starrer movie Prince, written by Sahithi Jayanth Kaykini Sung by Shaan & Rita, Music by V.Harikrishna, The audio rights of the film have been bagged by renowned audio company Anand Audio.

  • ಹಾಡು : ಖುಷಿಯಲಿ ಖುಷಿಯಲಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಶಾನ್‌, ರೀಟಾ
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Khushiyali Khushiyali Song Lyrics in Kannada

ಖುಷಿಯಲಿ ಖುಷಿಯಲಿ
ಗರಿಯನು ತೇಲಿ ಬಿಡು
ಉಸಿರಲಿ ಉಸಿರಲಿ
ಒಲವನು ಹೇಳಿ ಬಿಡು

ಕೋಮಲವಾದ ಕಾಮನೆ ತುಂಬಿ
ತಂದಿರುವೆ ಹಸಿಹಾಡು
ಈ ಚಂದದ ಕೋಪ
ಚಂಚಲ ರೂಪ
ಇದೆಲ್ಲ ಬೇಗ ನನಗೆ ಕೊಡು

||ಖುಷಿಯಲಿ ಖುಷಿಯಲಿ
ಗರಿಯನು ತೇಲಿ ಬಿಡು
ಉಸಿರಲಿ ಉಸಿರಲಿ
ಒಲವನು ಹೇಳಿ ಬಿಡು||

ಮಧುರವಾಯಿತು
ಪರಿಚಯ ಬೆಳೆಯುತ
ಪ್ರಖರವಾಯಿತು
ಪರಿಮಳ ಸೆಳೆಯುತ
ಎದುರೆ ನೀನಿರಲು

ಬೆರಳು ಸಾಲದು
ನೆನಪನು ಎಣಿಸಲು
ಇರುಳು ಸಾಲದು
ವಿರಹವ ಸಹಿಸಲು
ವಿಷಯ ಹೀಗಿರಲು

ಕುತೂಹಲ ಕೆರಳುವಂತೆ
ಪ್ರತಿಫಲ ದೊರಕುವಂತೆ
ನಿನ್ನ ಮತ ನಂಗೆ ಕೊಡು

||ಖುಷಿಯಲಿ ಖುಷಿಯಲಿ
ಗರಿಯನು ತೇಲಿ ಬಿಡು||

ಅಳಿಸಲಾಗದ ಹೃದಯದ
ಕಲೆಯನು
ತಿಳಿಸಲಾಗದ ಲಹರಿಯ
ಅಲೆಯನು
ನಿನಗೆ ಅರ್ಪಿಸಲೇ

ಬಿಡದೆ ಕಾಡುವ
ಸುಮಧುರ ಕೊರತೆಯ
ಹಿಡಿಯ ಹೋದರೆ
ಸರಿಯುವ ಕವಿತೆಯ
ಕುಳಿತು ಚರ್ಚಿಸಲೇ

ಸತಾಯಿಸಿ ಸನಿಹದಿಂದ
ಸುಧಾರಿಸು ಸರಸದಿಂದ
ಎಲ್ಲಾ ಹಠ ಅಲ್ಲೇ ಇಡು

||ಖುಷಿಯಲಿ ಖುಷಿಯಲಿ
ಗರಿಯನು ತೇಲಿ ಬಿಡು
ಉಸಿರಲಿ ಉಸಿರಲಿ
ಒಲವನು ಹೇಳಿ ಬಿಡು||

Khushiyali Khushiyali Song Lyrics in English

Khushiyali Khushiyali
Gariyanu Theli Bidu
Usirali Usirali
Olavanu Heli Bidu

Komalavada Kaamane Thumbi
Thandiruve Hasihadu
Ee Chandada Kopa
Chanchala Roopa
Idella Bega Nanage Kodu

||Khushiyali Khushiyali
Gariyanu Theli Bidu
Usirali Usirali
Olavanu Heli Bidu||

Madhuravayithu
Parichaya Beleyutha
Prakharavayithu
Parimala Seleyutha
Edure Neeniralu

Beralu Saaladu
Nenapanu Enisalu
Irulu Saaladu
Virahava Sahisalu
Vishaya Heegiralu

Kuthuhala Keraluvanthe
Prathiphala Dorakuvanthe
Ninna Matha Nange Kodu

||Khushiyali Khushiyali
Gariyanu Theli Bidu||

Alisalaagada Hrudayada
Kaleyanu
Thilisalaagada Lahariya
Aleyanu
Ninage Arpisale

Bidade Kaaduva
Sumadhura Koratheya
Hidiya Hodare
Sariyuva Kavitheya
Kulithu Charchisale

Sathaayisi Sanihadinda
Sudharisu Sarasadinda
Ellaa Hata Alle Idu

||Khushiyali Khushiyali
Gariyanu Theli Bidu
Usirali Usirali Olavanu Heli Bidu||

Song Details :

  • Song Name : Khushiyali Khushiyali
  • Movie Name : Prince
  • Cast : Chllengingstar Darshan, Jennifer Kothwal, Nikhitha Thukral
  • Released On : 31 March 2011
  • Music : V.Harikrishna
  • Singer : Shaan, Rita
  • Lyricist : Jayanth Kaikini
  • Director : N.Omprakash Rao
  • Producer : Sandesh Nagaraj
  • Audio Label / Credits : Anand Audio

LEAVE A REPLY

Please enter your comment!
Please enter your name here