Home Lyrics Kushalave Kshemave Song Lyrics in Kannada – Yaare Neenu Cheluve

Kushalave Kshemave Song Lyrics in Kannada – Yaare Neenu Cheluve

31
0
Kushalave Kshemave Song Kannada Lyrics

ಕ್ರೇಜಿ಼ಸ್ಟಾರ್‌ ರವಿಚಂದ್ರನ್‌, ಸಂಗೀತಾ ನಟಿಸಿರುವ ಯಾರೇ ನೀನು ಚೆಲುವೆ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದು ಶ್ರೀನಿವಾಸ್‌, ಅನುರಾಧ ಶ್ರೀರಾಮ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಝೇಂಕಾರ್‌ ಮ್ಯೂಸಿ಼ಕ್ ಒಡೆತನದಲ್ಲಿದೆ.

  • ಹಾಡು : ಯಾರೇ ನೀನು ಚೆಲುವೆ
  • ಸಂಗೀತ : ಹಂಸಲೇಖ
  • ಸಾಹಿತ್ಯ : ಹಂಸಲೇಖ
  • ಗಾಯನ : ಶ್ರೀನಿವಾಸ್‌, ಅನುರಾಧ ಶ್ರೀರಾಮ್‌

Kushalave Kshemave Song Lyrics in Kannada

ಕುಶಲವೇ ಕ್ಷೇಮವೇ ಸೌಖ್ಯವೇ ಓ ನನ್ನ ಪ್ರೀತಿ ಪಾತ್ರಳೇ
ಓದಮ್ಮ ನನ್ನ ಓಲೆ ಹೃದಯ ಭಾವಲೀಲೆ
ಕಲ್ಪನೆಯೇ ಹೆಣ್ಣಾಗಿದೆ ಕನಸುಗಳೇ ಹಾಡಾಗಿದೆ
ಯಾರೇ ನೀನು ಚೆಲುವೆ ಅಂದಿದೆ
ಕುಶಲವೇ ಕ್ಷೇಮವೇ ಸೌಖ್ಯವೇ ನಾ ನಿನ್ನ ಓಲೆ ಓದಿದೆ
ತೆರೆದ ಹೃದಯವದು ಪ್ರೇಮ ರೂಪವದು

ಒಂದೇ ಉಸಿರಿನಲಿ ಪ್ರಥಮ ಪತ್ರ ಓದಿದೆ
ಆ ನಿನ್ನ ಉಸಿರಿನಲೆ ಈ ಜೀವ ಜೀವಿಸಿದೆ
ಮುದ್ದಾದ ಬರಹ ಮರೆಸಿದೆ ವಿರಹ
ಅಕ್ಷರಕ್ಕೆ ಯಾರೋ ಈ ಮಾಯಾಶಕ್ತಿ ತಂದರೋ
ಒಂದೊಂದು ಪತ್ರವು ಪ್ರೇಮದ ಗ್ರಂಥವೂ
ಓಲೆಗಳಿಗ್ಯಾರೋ ಈ ರಾಯಭಾರ ತಂದರೋ
ಓಲೆಗಳೇ ಬಾಳಾಗಿದೆ ಓದುವುದೇ ಗೀಳಾಗಿದೆ
ಯಾರೋ ನೀನು ಚೆಲುವ ಅಂದಿದೆ
ಕುಶಲವೇ ಕ್ಷೇಮವೇ ಸೌಖ್ಯವೇ ಈ ಮಾತೇ ಮಧುರವಾಗಿದೆ
ತೆರೆದ ಹೃದಯವದು ಪ್ರೇಮ ರೂಪವದು

ನೂರಾರು ಪ್ರೇಮದಾಸರು ಪ್ರೀತಿಸಿ ದೂರವಾದರು
ನಾವಿಂದು ದೂರ ಇದ್ದರೂ ವಿರಹಗಳೆ ನಮ್ಮ ಮಿತ್ರರು
ನೋಡೋರ ಕಣ್ಣಲ್ಲಿ ಏನೇನೋ ಹಾಡೋ ಹುಚ್ಚರು
ದೂರಾನೇ ಆರಂಭ ಸೇರೋದೇ ಅಂತಿಮ
ಅಲ್ಲಿವರೆಗೂ ಯಾರು ಈ ಹುಚ್ಚು ಪ್ರೀತಿ ಮೆಚ್ಚರೂ
ದೂರದಲೇ ಹಾಯಾಗಿದೆ ಕಾಯುವುದೇ ಸುಖವಾಗಿದೆ
ಯಾರೇ ನೀನು ಚೆಲುವೆ ಅಂದಿದೆ
ಕುಶಲವೇ ಕ್ಷೇಮವೇ ಸೌಖ್ಯವೇ ನಾ ನಿನ್ನ ಓಲೆ ಓದಿದೆ
ತೆರೆದ ಹೃದಯವದು ಪ್ರೇಮ ರೂಪವದು

Kushalave Kshemave Song Lyrics in English

Kushalave Kshemave Soukhyave O Nanna Preethi Paatrale
Odamma Nanna Ole Hrudaya Bhavaleele
Kalpaneye Hennaagide Kanasugale Haadagide
Yaare Neenu Cheluve Andide
Kushalave Kshemave Soukhyave Naa Ninna Ole Odide
Thereda Hrudayavadu Prema Roopavadu

Onde Usirinali Prathama Pathra Odide
Aa Ninna Usirinale Ee Jeeva Jeeviside
Muddaada Baraha Mareside Viraha
Akasharakke Yaaro Ee Maayashakthi Thandaro
Ondondu Pathravu Premada Granthavu
Olagaligyaro Ee Rayabhara Thandaro
Olagale Bhalagide Oduvude Geelagide
Yaaro Neenu Cheluva Andide
Kushalave Kshemave Soukhyave Ee Maathe Madhuravagide
Thereda Hrudayavadu Prema Roopavadu

Nooraru Premadasaru Preethisi Dooravadaru
Naavindu Doora Iddaru Virahagale Namma Mithraru
Nodora Kannalli Eneno Haado Huccharu
Doorane Aarambha Serode Anthima
Allivaregu Yaaru Ee Hucchu Preethi Meccharu
Dooradale Haayagide Kaayuvude Sukhavagide
Yaare Neenu Cheluve Andide
Kushalave Kshemave Soukhyave Naa Ninna Ole Odide
Thereda Hrudayavadu Prema Roopavadu

Song Details :

  • Song Name : Kushalave Kshemave
  • Movie Name : Yaare Neenu Cheluve
  • Released On : 22 April 1998
  • Cast : Crazystar Ravichandran, Sangeetha
  • Music : Hamsalekha
  • Singer : Srinivas, Anuradha Sriram
  • Director : D.Rajendra Babu
  • Producer : Rockline Venkatesh
  • Audio Label : Jhenkar Music

LEAVE A REPLY

Please enter your comment!
Please enter your name here