Home Singers Chethan Life-u Ishtene Songs Lyrics in Kannada – Pancharangi

Life-u Ishtene Songs Lyrics in Kannada – Pancharangi

68
1
Lifu Ishtene Song Kannada Lyrics

ದಿಂಗತ್‌, ನಿಧಿ ಸುಬ್ಬಯ್ಯ, ಅನಂತ್‌ ನಾಗ್‌ ಅಭಿನಯದ ಪಂಚರಂಗಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ, ಚೇತನ್‌ ಸೋಸ್ಕಾ, ಅಕ್ಷಯಾ & ಯೋಗರಾಜ್‌ ಭಟ್‌ ಹಾಡಿದ್ದು ಈ ಚಿತ್ರದ ಹಾಡುಗಳ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Pancharangi starring Dingath, Nidhi Subbaiah, Ananth Nag, written by Yograj Bhatt, Music Composed by Manomurthy. Chetan Soska, Akshatha & Yograj Bhatt Sung the song. Songs rights are owned by renowned audio company Anand Audio.

Other Songs from Pancharangi :

 • ಹಾಡು : ಲೈಫು ಇಷ್ಟೇನೆ
 • ಸಂಗೀತ : ಮನೋಮೂರ್ತಿ
 • ಗಾಯನ : ಚೇತನ್‌ ಸೋಸ್ಕಾ, ಅಕ್ಷತಾ & ಯೋಗರಾಜ್‌ ಭಟ್
 • ಸಾಹಿತ್ಯ : ಯೋಗರಾಜ್‌ ಭಟ್

Life-u Ishtene Songs Lyrics in Kannada

ಆ ಗಿಜಿಬಿಜಿಗಿಜಿ ಒಒಓ
ಓ ಲೈಫು ಇಷ್ಟೇನೆ…
ಕಿರಿಕಿರಿ ಕಯಕಯ ಕೊಕ್ಕೊಕ್ಕೋ
ಲೈಫು ಹಿಂಗೇನೆ…

ಓ… ಮುದ್ದು ಕಂದನಾಗಿ ಹುಟ್ಟಿ
ಹೆಸರು ಗಿಸರೂ ಇಟ್ಟುಕೊಂಡು
ಹಂಗೂ ಹಿಂಗೂ ದೊಡ್ಡೋನಾಗು
ಲೈಫು ಇಷ್ಟೇನೆ
ಆಹ ಹ ಹ ಹಾ
ಯದ್ವಾ ತದ್ವಾ ಮಾರ್ಕ್ಸು ತೆಗೆದು
ಅಪ್ಪಾ ಹೇಳೋ ಕೋರ್ಸು ಮುಗಿಸಿ
ಸ್ನಾನ ಮಾಡ್ಕೊಂಡ್‌ ಕೆಲ್ಸ ಹುಡುಕು
ಲೈಫು ಇಷ್ಟೇನೆ
ಸಂಬ್ಳ ಬರುವ ಕೆಲ್ಸ ಹಿಡಿದು
ಸಿಂಬ್ಳ ಸುರಿವ ಮಕ್ಕಳ ಹಡೆದು
ಕುಂಬಳಕಾಯಿ ಹಲ್ವ ಮಾಡು
ಲೈಫು ಇಷ್ಟೇನೆ
ಟ್ಯಾಂವ್ಡ್‌ ಟ್ಯಾಂವ್ ಟ್ಯಾಂವ್‌ ಟ್ಯಾಂವ್
ನಮ್ಮ ಮಂದಿ ಪಾಪದೋರು
ಸ್ವಲ್ಪ ಹಂಗೇನೆ
ಕಣ್ಣು ಮುಚ್ಚಿಕೊಂಡು ನೋಡು
ಲೈಫು ಹಿಂಗೇನೆ

ಆ ಗಿಜಿಬಿಜಿಗಿಜಿ ಒಒಓ
ಕಿರಿಕಿರಿ ಕಯಕಯ ಕೊಕ್ಕೊಕ್ಕೋ
ಕಿರಿಯರ ಸರಿಗಮ ಅಅಇಉಉಎಏಏಒಒಓ

ಅಪ್ಪಾ ನಿಂಗೆ ಟೆನ್ಷನ್‌ ಯಾಕೋ
ಬಿಳಿಯ ಕೂದಲಿಗೆ ಕಪ್ಪು ಬಳಕೋ
ಡಯಾಬಿಟೀಸಿಗೆ ವಾಕಿಂಗ್‌ ಮಾಡ್ಕೋ
ಲೈಫು ಇಷ್ಟೇನೆ
ಬೌಬ ಬೌಬೌಬೌ
ಅಮ್ಮಾ ನೋಡು ರಾಹುಕಾಲ
ಬಿಗಿಯಾಗ್‌ ಹಿಡ್ಕೋ ದೇವರ ಕಾಲು
ದೇವರೆ ಕೈಯ ಮುಗಿಯಲಿ ನಿಂಗೆ
ಲೈಫು ಇಷ್ಟೇನೆ
ಪಂವ್‌ಪ ಪಂವ್‌ ಪಂವ್‌ ಪಂವ್‌

ಗಂಡ ಹೆಂಡತಿ ಇಬ್ರೂ ದುಡ್ದು
ಸಾಲ ಮಾಡಿ ಮನೆಯಾ ಕಟ್ಟಿ
ಮಕ್ಳು ಎಲ್ಲೋದ್ರಂತ ಹುಡುಕಿ
ಲೈಫು ಇಷ್ಟೇನೆ
ಮ್ಯಾಂವ್‌ಮ ಮ್ಯಾಂವ್‌ ಮ್ಯಾಂವ್‌
ಓಡಬೇಡ ಸ್ಟೇಜಿನಿಂದ
ಪಾರ್ಟು ನಿಂದೇನೆ
ಬಣ್ಣ ಹಚ್ಚಿಕೊಂಡ ಮೇಲೆ
ಲೈಫು ಹಿಂಗೇನೆ

ಆ ಗಿಜಿಬಿಜಿಗಿಜಿ ಬಸಿಬಜಿಬಪ್ಪೋ
ಕಿರಿಯರ ಕಯಿಕಯಿ ಲಬಲಬ್ಬೋ
ಹಿರಿಮಗಕಿರಿಮಗ ಬೆಬೆಬೆಪ್ಪೋ
ಲಬಲಬ್ಬೋ ಲಬಲಬಲಬ್ಬೋ

ಹುಡುಗಿ ಜೊತೆಗೆ ಜಗಳ ಆಡು
ಹಗಲೂ ರಾತ್ರಿ ಮೆಸೇಜು ಮಾಡು
ಕ್ಯಾಂಟೀನ್‌ ನಲ್ಲೇ ಓತ್ಲಾ ಹೊಡ್ಕೋ
ಲೈಫು ಇಷ್ಟೇನೆ
ಟಣ್ ಟಣಾ ಟಣ್‌ ಟಣ್‌
ನೋಕಿಯಾದಲ್ಲಿ ಏನೇನುಂಟು
ಏರ್‌ಟೆಲ್‌ನಲ್ಲಿ ಏನೇನಿಲ್ಲಾ
ಸಿಲಬಸ್‌ಗಿಂತ ಜಾಸ್ತಿ ತಿಳ್ಕೋ
ಲೈಫು ಇಷ್ಟೇನೆ
ಟ್ರಿಣ್‌ಟ್ರಿ ಟ್ರಿಣ್‌ ಟ್ರಿಣ್‌ ಟ್ರಿಣ್‌
ಅಪ್ಪ ಅಮ್ಮ ಬೈತಾರಂತ
ದಿನವೂ ಕಾಲೇಜ್‌ ಕಡೆಗೆ ಹೋಗು
ಎಕ್ಸಾಂ ಟೈಮಲ್ಲಿ ಮೇಷ್ಟ್ರಿಗೆ ಬೈಯ್ಯಿ
ಲೈಫು ಇಷ್ಟೇನೆ
ಢಣ್ ಢಣಾ ಢಣ್‌ ಢಣ್‌
ಪ್ರಾಯವೆಂಬ ಸ್ಕೂಲಿನಲ್ಲಿ
ಎಲ್ಲ ಸಂಡೇನೆ
ರೆಕ್ಕೆ ಬಿಚ್ಚಿಕೊಂಡು ಹಾಡು
ಲೈಫು ಹಿಂಗೇನೆ

ಬದುಕು ನೀನು ವಾಸ್ತು ಪ್ರಕಾರ
ಕುಬೇರ ಮೂಲೆ ಮಾತ್ರ ಕಟ್ಸು
ಟಾಯ್ಲೆಟ್‌ ಒಳಗೆ ಹೋಗಿ ಮಲ್ಕೋ
ಲೈಫು ಇಷ್ಟೇನೆ
ಆಹಹಹಹಾ
ಹಿಂದಿನ ಜನ್ಮದ ರಹಸ್ಯ ತಿಳ್ಕೋ
ಮುಂದಿನ ಜನ್ಮದ ಭವಿಷ್ಯ ತಿಳ್ಕೋ
ಈಗಿನ ಜನ್ಮ ಹಾಳಾಗೋಗ್ಲಿ
ಲೈಫು ಇಷ್ಟೇನೆ
ಢಂಡ ಢಂಢಂಢಂ

ತುಂಬಾ ಒಳ್ಳೇವ್ರಪ್ಪ ನೀವು
ಪೂರ್ತಿ ಕೆಟ್ಟೋವ್ರಪ್ಪ ನಾವು
ನಮ್ಮ ಹಾಡನು ಕೇಳಲೆಬೇಡಿ
ಲೈಫು ಇಷ್ಟೇನೆ
ಮ್ಯಾಮ ಮಿಂಯಾವ್‌ ಮಿಂಯಾವ್
ನಾನು ಕಂಡ ತುಂಬ ದೊಡ್ಡ
ಲೂಸು ನೀನೇನೇ
ಬಾಯಿ ಮುಚ್ಚಿಕೊಂಡು ಹಾಡು
ಲೈಫು ಹಿಂಗೇನೆ

ಆ ಗಿಜಿಬಿಜಿತರ ತರರಂಪೋ
ಕಿರಿಯರ ಕಲರವ ಅಯಯಪ್ಪೋ
ಹಿರಿಯರ ಬದುಕಿದು ಮುಗಿತಪ್ಪೋ
ತರ ತರರಪ್ಪೋ ತರ ತರರಪ್ಪೋ

Life-u Ishtene Songs Lyrics in English

Aa Gijibijigiji Ooo
O Lifu Ishtene…
Kirikiri Kayakaya Kokkokko
Lifu Ishtene…

O… Muddu Kandanagi Hutti
Hesaru Gisaru Ittukondu
Hangu Hingu Doddonagu
Lifu Ishtene
Aaha Ha Ha Haa
Yadwa Thadwa Marks-u Thegedu
Appa Helo Course-u Mugisi
Snaana Maadkond Kelsa Huduku
Life-u Ishtene
Sambla Baruva Kelsa Hididu
Simbla Suriva Makkala Hadedu
Kumbalakayi Halwa Maadu
Life-u Ishtene
Tyawd Tyav Tyav Tyav
Namma Mandi Paapadoru
Swalpa Hangene
Kannu Mucchikondu Nodu
Life-u Hingene

Aa Gijibijigiji Ooo
Kirikiri Kayakaya Kokkokko
Kiriyara Sarigama Aa Aa E U Uu A A A O O O

Appa Ninge Tention Yaako
Biliya Koodalige Kappu Balako
Dayabitisige Walking Maadko
Life-u Ishtene
Bowba Bow bow bow
Ammaa Nodu Rahukala
Bigiyag Hidko Devara Kaalu
Devare Kaiya Mugiyali Ninge
Life-u Ishtene
Pavpa Pav Pav Pav

Gandahendathi Ibru Duddu
Saala Maadi Maneyaa Katti
Maklu Ellodrantha Huduki
Life-u Ishtene
Myavma Myav Myav
Odabeda Stage ninda
Part-u Nindene
Banna Hacchikondmele
Life-u Hingene

A Gijibijigiji Basibajibappo
Kiriyara Kayikayi Labalabbo
Hirimaga Kirimaga Bebebeppo
Labalabbo Labalabalabbo

Hudugi Jothege Jagala Aadu
Hagalu Rathri Message-u Maadu
Canteen Nalle Othla Hodko
Life-u Ishtene
Tan Tana Tan Tan
Nokiadalli Enenuntu
Airtelnalli Enenilla
Syllabus gintha Jasthi Thlko
Life-u Ishtene
Trintri Trin Trin Trin

Appa Amma Baitharantha
Dinavu College Kadege Hogu
Exam Time alli Meshtrige Bayyi
Life-u Ishtene
Dan Dana Dan Dan Dan
Praayavemba Schoolinalli
Ella Sunday ne
Rekke Bicchikondu Haadu
Life-u Hingene

Baduku Neenu Vaasthu Prakara
Kubera Moole Mathra Katsu
Toilet Olage Hogi Malko
Life-u Ishtene
Aahahahahaa
Hindina Janmada Rahasya Thilko
Mundina Janmada Bhavishya Thilko
Eegina Janma Halagogli
Life-u Ishtene
Damda Dam Dam Dam

Thumba Ollevrappa Neevu
Poorthi Kettovrappa Naavu
Namma Haadanu Kelalebedi
Life-u Ishtene
Myavma Miyav Miyav
Naanu Kanda Thumba Dodda
Loose-u Neenene
Baayi Mucchikondu Haadu
Life-u Hingene

Aa Gijibijitara Tararampo
Kiriyara Kalarava Ayayappo
Hiriyara Badukidu Mugithappo
Tara Tararappo Tara Tararappo

Song Details :

 • Song Name : Life-u Ishtene
 • Movie Name : Pancharangi
 • Released On : 2010
 • Cast : Diganth, Nidhi Subbaiah, Ananthnag
 • Music : Mano Murthy
 • Singer : Chethan Sosca, Akshatha & Yogaraj Bhat
 • Lyricist : Yogaraj Bhat
 • Director & Producer : Yogaraj Bhat
 • Audio Label Credits : Anand Audio

1 COMMENT

LEAVE A REPLY

Please enter your comment!
Please enter your name here