Home Lyrics Madarangiyalli Song Lyrics in Kannada – Milana

Madarangiyalli Song Lyrics in Kannada – Milana

60
1
Madarangiyalli Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಪಾರ್ವತಿ ತಿರುವೊತ್ತು, ಪೂಜಾಗಾಂಧಿ ಅಭಿನಯದ ಮಿಲನ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ರಾಜೇಶ್‌ ಕೃಷ್ಣನ್‌, ಶ್ರೇಯಾ ಘೋಷಾಲ್ ಹಾಡಿದ್ದಾರೆ, ಚಿತ್ರಕ್ಕೆ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡಿದ್ದು ನಾಯಕ ನಾಯಕಿಯ ಮದುವೆ ಸಮಯದಲ್ಲಿ ಈ ಹಾಡು ಮೂಡಿ ಬರುತ್ತದೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Milana :

  • ಹಾಡು : ಮದರಂಗಿಯಲ್ಲಿ
  • ಸಂಗೀತ : ಮನೋಮೂರ್ತಿ
  • ಗಾಯನ : ರಾಜೇಶ್‌ ಕೃಷ್ಣನ್‌, ಶ್ರೇಯಾ ಘೋಷಾಲ್
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Madarangiyalli Song Lyrics in Kannada

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ
ಬನ್ನಿ ಕುಣಿಯೋಣ ಎಲ್ಲಾ ಸೇರಿ ನಲಿಯೋಣ
ಶುಭ ಕೋರಿ ಉಲ್ಲಾಸದಲ್ಲಿ ಈ ದಿನ
ಬಾಳ ದಾರಿಲಿ ಹೊಸ ಜೋಡಿ ಹೊರಟಿದೆ
ಜೊತೆಗೂಡಿ ಎಲ್ಲೆಲ್ಲೂ ತಳಿರು ತೋರಣ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ

ಬನ್ನಿ ಕುಣಿಯೋಣ ಎಲ್ಲಾ ಸೇರಿ ನಲಿಯೋಣ
ಶುಭ ಕೋರಿ ಉಲ್ಲಾಸದಲ್ಲಿ ಈ ದಿನ

ಬಾಳ ದಾರಿಲಿ ಹೊಸ ಜೋಡಿ ಹೊರಟಿದೆ
ಜೊತೆಗೂಡಿ ಎಲ್ಲೆಲ್ಲೂ ತಳಿರು ತೋರಣ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ

ಆಟದ ಬಯಲಿನ ಆಟವ ತೊರೆದು
ನೂತನ ಪುಟವನು ತೆರೆಯುವ ಸಮಯ
ಕಳಶದ ಕನ್ನಡಿ ಹೊಳೆಯುತಲಿರಲು
ಮಮತೆಯ ಧಾರೆಯ ಎರೆಯುವ ಸಮಯ
ಹಿರಿಯರ ಹೃದಯವು ಹನಿಯುವ ಸಮಯ
ಹೋ, ಹರೆಯದ ಕಂಗಳು ಅರಳುವ ಸಮಯ
ಕೈಯ್ಯಲ್ಲಿರಲು ಹೂ ಮಾಲೆ, ಕಣ್ಣಿನಲ್ಲಿ ಪ್ರಾಣ
ತೆರೆಯೊಂದು ಸರಿದಾಗ ಸಂಜೀವನ
ಅಕ್ಷತೆಯು ಈಗ ನಾಚುತ ಕೆಂಪಗಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ

ಮಳೆ ಬಿಸಿಲಿರಲಿ ಸಿಹಿಕಹಿ ಇರಲಿ
ಆಸರೆಯಾಗುವ ವಚನದ ಸಮಯ
ಮಂಗಳ ಸೂತ್ರದಿ ಬಾಳಿನ ಪಟವು
ಬಾನಿಗೆ ಏರುವಾ ಪಯಣದ ಸಮಯ

ನಲುಮೆಯ ದಿಬ್ಬಣ ನಲಿಯುವ ಸಮಯ
ಓ… ನೆನಪಿನ ಬಾಗಿನ ನೀಡುವ ಸಮಯ
ಅಗ್ನಿ ಸಾಕ್ಷಿಯಲ್ಲೀಗ ಅಂತರಂಗ ಮಿಲನ
ಚೆಲುವಿನ ಔತಣದ ಸಮ್ಮಿಲನ
ಪಲ್ಲಕ್ಕಿ ಇಂದು ಹಾರುವ ಹಕ್ಕಿಯಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ
ಬನ್ನಿ ಕುಣಿಯೋಣ ಎಲ್ಲಾ ಸೇರಿ ನಲಿಯೋಣ
ಶುಭ ಕೋರಿ ಉಲ್ಲಾಸದಲ್ಲಿ ಈ ದಿನ
ಬಾಳ ದಾರಿಲಿ ಹೊಸ ಜೋಡಿ ಹೊರಟಿದೆ
ಜೊತೆಗೂಡಿ ಎಲ್ಲೆಲ್ಲೂ ತಳಿರು ತೋರಣ

ಬಲಗಾಲನಿಟ್ಟು ಬಾಳೆಂದು ಒಳಗೆ ಬಂದಿದೆ
ಮನದಂಗಳದಲ್ಲಿ ಪ್ರೀತಿಯ ದೀಪ ಬೆಳಗಿದೆ…

Madarangiyalli Song Lyrics in English

Madarangiyalli Manasina Rangu Moodide
Madarangiyalli Manasina Rangu Moodide
Baasingadalli Kanasina Muthu Thoogide
Banni Kuniyona Ellaa Seri Naliyona
Shubha Kori Ullasadalli Ee Dina
Baala Daarili Hosa Jodi Horatide
Jothegoodi Ellellu Thaliru Thorana
Madarangiyalli Manasina Rangu Moodide
Baasingadalli Kanasina Muthu Thoogide

Banni Kuniyona Ellaa Seri Naliyona
Shubha Kori Ullasadalli Ee Dina

Baala Daarili Hosa Jodi Horatide
Jothegoodi Ellellu Thaliru Thorana
Madarangiyalli Manasina Rangu Moodide
Baasingadalli Kanasina Muthu Thoogide

Aatada Bayalina Aatava Thoredu
Noothana Putavanu Tereyuva Samaya
Kalashada Kannadi Holeyuthaliralu
Mamatheya Dhaareya Ereyuva Samaya
Hiriyara Hrudayavu Haniyuva Samaya
Ho, Hareyada Kngalu Araluva Samaya
Kaiyyalliralu Hoo Maale, Kanninalli Praana
Tereyondu Saridaaga Sanjeevana
Akshatheyu Eega Naachutha Kempagagide
Madarangiyalli Manasina Rangu Moodide

Male Bisilirali Sihikahi Irali
Aasareyaguva Vachanada Samaya
Mangala Suthradi Baalina Patavu
Baanige Eruvaa payanada Samaya

Nalumeya Dibbana Naliyuva Samaya
O… Nenapina Baagina Needuva Samaya
Agni Saakshiyalliga Antharanga Milana
Cheluvina Authanada Sammilana
Pallakki Indu Haaruva Hakkiyagide
Madarangiyalli Manasina Rangu Moodide
Banni Kuniyona Ellaa Seri Naliyona
Shubha Kori Ullasadalli Ee Dina
Baala Daarili Hosa Jodi Horatide
Jothegudi Ellellu Thaliru Thorana

Balagalanittu Baalendu Olage Bandide
Manadangaladalli Preethiya Deepa Belagide…

Song Details :

  • Song Name : Madarangiyalli
  • Movie Name : Milana
  • Released On : 14 September 2007
  • Cast : Powerstar Puneeth Rajkumar, Parvathy Thiruvothu, Pooja Gandhi, Mukhyamantri Chandru
  • Music : Manomurthy
  • Singers : Rajesh Krishnan, Shreya Ghoshal
  • Lyricist : Jayanth Kaikini
  • Director : Prakash
  • Producer : Dushyanth
  • Audio Label : Anand Audio

1 COMMENT

LEAVE A REPLY

Please enter your comment!
Please enter your name here