Home Lyrics Male Ninthu Hoda Mele Song Lyrics in Kannada – Milana

Male Ninthu Hoda Mele Song Lyrics in Kannada – Milana

79
5
Male Ninthu Hoda Mele Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಪಾರ್ವತಿ ತಿರುವೊತ್ತು, ಪೂಜಾಗಾಂಧಿ ಅಭಿನಯದ ಮಿಲನ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌, ಶ್ರೇಯಾ ಘೋಷಾಲ್ ಹಾಡಿದ್ದಾರೆ, ಚಿತ್ರಕ್ಕೆ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡಿದ್ದು ನಾಯಕಿಗೆ ನಾಯಕನ ಮೇಲೆ ಪ್ರೀತಿಯುಂಟಾಗಿ ಅದನ್ನು ಅವನ ಬಳಿ ವ್ಯಕ್ತಪಡಿಸಲಾಗದೆ ನಾಯಕಿ ಅಸಹಾಯಕಳಾದಾಗ ಈ ಹಾಡು ಮೂಡಿ ಬರುತ್ತದೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Milana :

  • ಹಾಡು : ಮಳೆ ನಿಂತು ಹೋದಮೇಲೆ
  • ಸಂಗೀತ : ಮನೋಮೂರ್ತಿ
  • ಗಾಯನ : ಸೋನು ನಿಗಮ್‌, ಶ್ರೇಯಾ ಘೋಷಾಲ್
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Male Ninthu Hoda Mele Song Lyrics in Kannada

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ

ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ ಏಕೀ ಅಂತರ
ನಿನ್ನಾ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೇ ಸಾರಿ ನೀ ಕೇಳೆಯಾ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ

ಕಣ್ಣು ತೆರೆದು ಕಾಣುವ ಮನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗಣ
ಕೇಳು ಜೀವವೇ ಏತಕೀ ಕಂಪನ
ಹೃದಯವು ಇಲ್ಲಿ ಕಳೆದು ಹೋಗಿದೆ
ಹುಡುಕಲೇ ಬೇಕೆ ತಿಳಿಯದಾಗಿದೆ…

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ

Male Ninthu Hoda Mele Song Lyrics in English

Male Ninthu Hoda Mele Haniyondu Moodide
Mathella Mugida Mele Daniyondu Kaadide
Heluvudu Eno Ulidu Hogide
Helali Hege Thiliyadagide….

Male Ninthu Hodamele Haniyondu Moodide
Mathella Mugida Mele Daniyondu Kaadide

Novinalli Jeeva Jeeva Aritha Nanthara
Nalivu Bere Enide Ekee Anthara
Ninna Hadinalli Indu Bereva Kathara
Onde Saari Nee Keleyaa Ee Swara
Manasalli Chooru Jaaga Bekide
Kelali Hege Thiliyadagide…

Male Ninthu Hoda Mele Haniyondu Moodide
Mathella Mugidaa Mele Daniyondu Kaadide

Kannu Theredu Kaanuva Kanase Jeevana
Sanna Hatava Maadide Hrudaya Ee Dina
Edeya Dooravaniya Kareya Ringana
Kelu Jeevave Ethakee Kampana
Hrudayavu Illi Kaledu Hogide
Hudukalebeke Thiliyadagide…

Male Ninthu Hodamele Haniyondu Moodide
Mathella Mugida Mele Daniyondu Kaadide
Heluvudu Eno Ulidu Hogide
Helali Hege Thiliyadagide…

Song Details :

  • Song Name : Male Ninthu Hoda Mele
  • Movie Name : Milana
  • Released On : 14 September 2007
  • Cast : Powerstar Puneeth Rajkumar, Parvathy Thiruvothu, Pooja Gandhi, Mukhyamantri Chandru
  • Music : Manomurthy
  • Singers : Sonu Nigam, Shreya Ghoshal
  • Lyricist : Jayanth Kaikini
  • Director : Prakash
  • Producer : Dushyanth
  • Audio Label : Anand Audio

5 COMMENTS

LEAVE A REPLY

Please enter your comment!
Please enter your name here