Home Lyrics Marali Mareyaagi Song Lyrics in Kannada – Savaari

Marali Mareyaagi Song Lyrics in Kannada – Savaari

48
1
Marali Mareyagi Song Kannada Lyrics

ರಘು ಮುಖರ್ಜಿ, ಶ್ರೀನಗರ ಕಿಟ್ಟಿ & ಕಮಲಿನಿ ಮುಖರ್ಜಿ ನಟಿಸಿರುವ ಸವಾರಿ ಚಿತ್ರದ ಈ ಹಾಡನ್ನು ಸುಧೀರ್‌ ಅತ್ತಾವರ್‌ ಬರೆದಿದ್ದು ಸಾಧನಾ ಸರ್ಗಮ್‌ ಹಾಡಿದ್ದಾರೆ, ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದು ಪ್ರೀತಿಯಲ್ಲಿರುವ ನಾಯಕ ನಾಯಕಿ ಕುರಿತು ಮೂಡಿ ಬಂದಿರುವ ರೊಮ್ಯಾಂಟಿಕ್‌ ಮೆಲೊಡಿ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Savaari :

  • ಹಾಡು : ಮರಳಿ ಮರೆಯಾಗಿ
  • ಸಂಗೀತ : ಮಣಿಕಾಂತ್‌ ಕದ್ರಿ
  • ಗಾಯಕರು : ಸಾಧನಾ ಸರ್ಗಮ್‌
  • ಸಾಹಿತ್ಯ : ಸುಧೀರ್‌ ಅತ್ತಾವರ್

Marali Mareyaagi Song Lyrics in Kannada

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕ್ಕೀಗ ಬಡಿದು ಒಲವು
ಸಿಹಿ ಕಹಿ ಕವನ
ಮರಳಿ ಮರೆಯಾಗಿ ತರಲಿ ತಂಗಾಳಿ
ಹೊಮ್ಮೀ ಹೊಸದಾದ ಹರುಷ ಹರವು
ಹಸಿ ಖುಷಿ ಕವನ
ಕನಸ ನೀ ನನಸಾಗಿಸಿ
ಕಲರವ ನೀ ಪಸರಿಸಿ
ನೀ… ಇನಿಯನೆ ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕ್ಕೀಗ ಬಡಿದು ಒಲವು
ಸಿಹಿ ಸವಿ ಕವನ

ರಿಂಗಣ ಹೊಸತನ ತನುವ ಈ ನರ್ತನ
ತಿಂಗಳ ಬೆಳಕನ ಕಂಡೆ ಈ ಸಂಜೆ ನಾ
ಧರೆಗಿಳಿದ ಕಿನ್ನರ ನೀ
ವಿಸ್ಮಯದ ಕಿರಣವೆ ನೀ
ನನ್ನ ಕನಸುಗಳು ತೇಲಾಡಿ ಕುಣಿಯುತಿವೆ
ನೀ ಇನಿಯನೇ ಪ್ರೀತಿಗೆ ಸಾರಥಿ

ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕ್ಕೀಗ ಬಡಿದು ಒಲವು
ಸಿಹಿ ಸವಿ ಕವನ

ಬೆಲ್ಲದ ಪಾಕವೆ ನಲ್ಲ ನಿನ್ನೊಲುಮೆಯೆ
ನಿಲ್ಲದಾ ತವಕವೆ ಭವ್ಯ ಸಮ್ಮಿಲನಕೆ
ಆಗಸಕೆ ರಂಗೆರಚಿ ಬಣ್ಣದಲಿ ಭಾವ ಜಿನುಗಿ
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯನೇ ಪ್ರೀತಿಗೆ ಸಾರಥಿ
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕ್ಕೀಗ ಬಡಿದು ಒಲವು
ಸಿಹಿ ಸವಿ ಕವನ

Marali Mareyaagi Song Lyrics in English

Marali Mareyaagi Therali Thereyaagi
Manada Dhadakeega Badidhu Olavu
Sihi Savi Kavana
Marali Mareyaagi Tharali Thangaali
Hommi Hosadaada Harusha Haravu
Hasi Khushi Kavana
Kanasa Nee Nanasaagisi
Kalarava Nee Pasarisi
Nee… Iniyane Preethige Saarathi
Marali Mareyaagi Therali Thereyaagi
Manada Dhadakeega Badidhu Olavu
Sihi Savi Kavana

Ringana Hosathana Thanuva Ee Narthana
Thingala Belakana Kande Ee Sanje Naa
Dharegilidaa Kinnara Nee
Vismayadaa Kiranave Nee
Nanna Kanasugalu Thelaadi Kuniyuthive
Nee Iniyane Preethige Saarathi

Marali Mareyaagi Therali Thereyaagi
Manada Dhadakeega Badidhu Olavu
Sihi Savi Kavana

Belladaa Paakave Nalla Ninnolumeye
Nilladaa Thavakave Bhavya Sammilanake
Aagasake Rangerachi Bannadali Bhava Jinugi
Nalla Chandirana Mella Keli Mudigirisu
Nee Iniyane Preethige Saarathi
Marali Mareyaagi Therali Thereyaagi
Manada Dhadakeega Badidhu Olavu
Sihi Savi Kavanaa……..

Song Details :

  • Song Name : Marali Mareyagi
  • Movie Name : Savaari
  • Released On : 10 April 2009
  • Cast : Raghu Mukharji, Kamalini Mukharji, Loose Maada
  • Music : Manikanth Kadri
  • Singers : Sadhana Sargam
  • Lyricist : Sudhir Athavar
  • Director : Jacob Varghese
  • Producer : Ramoji Rao
  • Audio Label Credits : Anand Audio

1 COMMENT

LEAVE A REPLY

Please enter your comment!
Please enter your name here