Home Lyrics Mouna Thaalithe Song Lyrics in Kannada – Ninnindale

Mouna Thaalithe Song Lyrics in Kannada – Ninnindale

34
0
Mouna Thalithe Daari Song Kannada Lyrics

ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಎರಿಕಾ ಫೆರ್ನಾಂಡಿಸ್‌ ಅಭಿನಯದ ನಿನ್ನಿಂದಲೇ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಅರ್ಜಿತ್‌ ಸಿಂಗ್ ಹಾಡಿದ್ದಾರೆ, ಮಣಿಶರ್ಮ ಚಿತ್ರಕ್ಕೆ ಸಂಗೀತ ನೀಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ಮೌನ ತಾಳಿತೆ
  • ಸಂಗೀತ : ಮಣಿಶರ್ಮ
  • ಗಾಯನ : ಅರ್ಜಿತ್‌ ಸಿಂಗ್
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

More Songs From Ninnindale :

Mouna Thaalithe Song Lyrics in Kannada

ಮೌನ ತಾಳಿತೆ ದಾರಿ
ನನ್ನ ಹೆಜ್ಜೆ ಸಪ್ಪಳ ಕೇಳಿ
ಮೋಡ ಹೋಯಿತೆ ಹಾರಿ
ಸಣ್ಣ ಗಾಳಿ ಮಾತನು ಕೇಳಿ
ಬದಲಾಯಿತೇನು ಕಣ್ಣ ಹೊಳಪು
ಸಿಗದಾಯಿತೇನು ನನ್ನ ಗುರುತು
ಇರಬಲ್ಲನೇನು ಎಲ್ಲ ಮರೆತು, ಮರೆತು, ಮರೆತೂ

ಮೌನ ತಾಳಿತೆ ದಾರಿ
ನನ್ನ ಹೆಜ್ಜೆ ಸಪ್ಪಳ ಕೇಳಿ
ಮೋಡ ಹೋಯಿತೆ ಹಾರಿ
ಸಣ್ಣ ಗಾಳಿ ಮಾತನು ಕೇಳಿ

ಕಲೆತು ಆಡಿದ ಸಾವಿರ ಸವಿಮಾತಿನ ಬಿಸಿ ಆರಿತೇ
ಸಲಿಗೆ ತೋರಿದ ಸ್ನೇಹವು ಹುಡುಗಾಟದ ಹಠವಾಯಿತೇ
ಕುಶಲ ಕೇಳುತಿವೆ… ಕುಶಲ ಕೇಳುತಿವೆ…
ನಡೆದ ದಾರಿಗಳು… ನಡೆದ ದಾರಿಗಳು…
ಅಳಿಸಲಾಗುವುದೇ, ಹಸಿಯ ಗೋಡೆಗೆ ಗೀಚಿದ ಸಾಲು
ಬದಲಾಯಿತೇನು ಕಣ್ಣ ಹೊಳಪು
ಸಿಗದಾಯಿತೇನು ನನ್ನ ಗುರುತು
ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ

ಕರಗಲಾರದೆ ಹೋದೇನೇ ಪದವಿಲ್ಲದ ಪರಿಭಾಷೆಗೆ
ಅರಳಬಲ್ಲೆನೇ ಈಗಲೂ ಎದೆಯಾಳದ ಅಭಿಲಾಷೆಗೆ
ಹಿಡಿದು ನಿಲ್ಲಿಸಿವೆ… ಹಿಡಿದು ನಿಲ್ಲಿಸಿವೆ…
ಕಡೆಯ ಮಾತುಗಳು… ಕಡೆಯ ಮಾತುಗಳು…
ತಡೆಯಲಾಗುವುದೇ, ಎದೆಯ ಬಾಗಿಲ ತಟ್ಟಿದ ಮೇಲೂ
ಬದಲಾಯಿತೇನು ಕಣ್ಣ ಹೊಳಪು
ಸಿಗದಾಯಿತೇನು ನನ್ನ ಗುರುತು
ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ

Mouna Thaalithe Song Lyrics in English

Mouna Thaalithe Daari
Nanna Hejje Sappala Keli
Moda Hoyithe Haari
Sanna Gaali Maathanu Keli
Badalayithenu Kanna Holapu
Sigadayithenu Nanna Guruthu
Iraballanenu Ella Marethu, Marethu, Marethu…

Mouna Thaalithe Daari
Nanna Hejje Sappala Keli
Moda Hoyithe Haari
Sanna Gaali Maathanu Keli

Kalethu Aadida Saavira Savimathina Bisi Aarithe
Salige Thorida Snehavu Hudugaatada Hatavaayithe
Kushala Keluthive… Kushala Keluthive…
Nadeda Daarigalu… Nadeda Daarigalu…
Alisalaguvude Hasiya Godege Geechida Saalu
Badalaayithenu Kanna Holapu
Sigadaayithenu Nanna Guruthu
Iraballenenu Ella Marethu, Marethu, Marethu…

Karagalaarade Hodene Padavillada Paribhashege
Aralaballene Eegalu Edeyaalada Abhilaashege
Hididu Nillisive… Hididu Nillisive…
Kadeya Maathugalu… Kadeya Maathugalu…
Thadeyalaguvude, Edeya Baagila Thattida Melu…
Badalayithenu Kanna Holapu
Sigadayithenu Nanna Guruthu
Iraballenenu Ella Marethu, Marethu, Marethu…

Song Details :

  • Song Name : Mouna Thaalithe
  • Movie Name : Ninnindale
  • Cast : Puneeth Rajkumar, Erica Fernandees, Sonia Deepthi, Sadhukokila
  • 16 January 2014
  • Music Name : Manisharma
  • Singer : Arjith Singh
  • Lyricist : Jayanth Kaikini
  • Director : Jayanth Paranji
  • Producer : Vijay Kiragandur
  • Audio Label / Credits : Anand Audio

LEAVE A REPLY

Please enter your comment!
Please enter your name here