Home Lyrics Kannada Mungaru Maleye Song Lyrics in Kannada – Mungaru Male

Mungaru Maleye Song Lyrics in Kannada – Mungaru Male

117
1
Mungaru Maleye Song Kannada Lyrics

ಈ ಹಾಡು ಮುಂಗಾರು ಮಳೆ ಚಿತ್ರದ ಟೈಟಲ್‌ ಸಾಂಗ್‌ ಆಗಿದ್ದು ಈ ಹಾಡಿನ ಸಾಹಿತ್ಯವನ್ನು ನಿರ್ದೇಶಕ ಯೋಗರಾಜ್‌ ಭಟ್‌ ಬರೆದಿದ್ದು ಹೆಸರಾಂತ ಗಾಯಕ ಸೋನು ನಿಗಮ್‌ ಹಾಡಿದ್ದಾರೆ, ಮನೋಮೂರ್ತಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಗೋಲ್ಡನ್‌ಸ್ಟಾರ್‌ ಗಣೇಶ್‌ ಮತ್ತು ಪೂಜಾಗಾಂಧಿ ನಟಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song is the title song of the movie Mungaru Male. The lyrics of this song are written by director Yograj Bhatt and sung by famous singer Sonu Nigam. The music is composed by Manomurthy. The film is played by Goldenstar Ganesh and Pooja gandhi. The audio rights of the film are held by renowned audio company Anand Audio.

Other Songs from Mungaru Male :

  • ಹಾಡು : ಮುಂಗಾರು ಮಳೆಯೇ
  • ಸಂಗೀತ : ಮನೋಮೂರ್ತಿ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಯೋಗರಾಜ್‌ ಭಟ್

Mungaru Maleye Song Lyrics in Kannada

ಮುಂಗಾರು ಮಳೆಯೇ… ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ.. ಧರೆಯ ಕೊರಳ ಪ್ರೇಮದ ಮಾಲೆ..
ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ..
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ ತಿಳಿಯದಾಗಿದೆ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬಾ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯ ಸವಿ ಸದ್ದು.. ಪ್ರೇಮನಾದವೋ
ಎಳೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು
ಬರೆದು ಹೆಸರ ಕಾಮನಬಿಲ್ಲು ಏನು ಮೋಡಿಯೋ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಯಾವ ಹನಿಗಳಿಂದ.. ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಷದಿಂದ.. ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ
ಯಾವ ಪ್ರೀತಿ ಹೂವು.. ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ.. ಯಾರು ಬಲ್ಲರೋ
ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ

ಒಲವ ಚೆಂದಮಾಮ.. ನಗುತ ಬಂದ ಮನದಂಗಳಕೆ
ಪ್ರೀತಿ ಬೆಳಕಿನಲ್ಲಿ.. ಹೃದಯ ಹೊರಟಿದೆ ಮೆರವಣಿಗೆ..
ಅವಳ ಪ್ರೇಮದೂರಿನ ಕಡೆಗೆ.. ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ ಕಳೆದು ಹೋದ ಸುಖವ ಇಂದು..
ಧನ್ಯನಾದೆ ಪಡೆದುಕೊಂಡು.. ಹೊಸ ಜನ್ಮವೋ
ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ

Mungaru Maleye Song Lyrics in English

Mungaru Maleye… Enu Ninna Hanigala Leele
Ninna Mugila Saale.. Dhareya Korala Premada Maale..
Suriva Olumeya Jadi Malege Preethi Moodidhe..
Yaava Chippinalli Yaava Haniyu Mutthaguvudo
Olavu Elli Kudiyodeyuvudo Thiliyadaagide
Mungaru Maleye Enu Ninna Hanigala Leele

Bhuvi Kenne Thumbaa Mugilu Surida Mutthina Guruthu
Nanna Edeya Thumbaa Avalu Banda Hejjeya Guruthu
Hejje Gejjeya Savi Saddu… Premanaadavo
Ele Mugilinalli Rangu Chelli Ninthalu Avalu
Baredu Hesara Kaamanabillu Enu Modiyo
Mungaru Maleye Enu Ninna Hanigala Leele

Yaava Hanigalinda… Yaava Nelavu Hasiraguvudo
Yaara Sparshadinda.. Yaara Manavu Hasiyaguvudo
Yaara Usiralyara Hesaro Yaaru Baredaro..
Yaava Preethi Hoovu.. Yaara Hrudayadallaraluvudo
Yaara Prema Poojege Mudipo.. Yaaru Ballaro
Mungaru Maleye.. Enu Ninna Hanigala Leele

Olava Chendamaama.. Nagutha Banda Manadangalake
Preethi Belakinalli.. Hrudaya Horatide Meravanige..
Avala Premadoorina Kadege.. Preethi Payanavo
Pranayadoorinalli Kaledu Hoda Sukhava Indu..
Dhanyanaade Padedhukondu.. Hosa Janmavo..
Mungaru Maleye.. Enu Ninna Hanigala Leele‌

Song Details :

  • Song Name : Mungaru Maleye
  • Movie Name : Mungaru Male
  • Cast : Golden Star Ganesh, Sanjana Gandhi
  • Released On : 29 December 2006
  • Music : Mano Murthy
  • Singer : Sonu Nigam
  • Lyricist : Yograj Bhat
  • Producer : E.Krishnappa
  • Director : Yograj Bhat
  • Music Label / Credits : Anand Audio

1 COMMENT

LEAVE A REPLY

Please enter your comment!
Please enter your name here