Home Lyrics Kannada Mussanje Veleli Song Lyrics in Kannada – Addhuri

Mussanje Veleli Song Lyrics in Kannada – Addhuri

31
0
Mussanje Veleli Kannada Song Lyrics

ಅದ್ಧೂರಿ ಚಿತ್ರದ ಈ ಹಾಡನ್ನು ನಿರ್ದೇಶಕ ಎ.ಪಿ.ಅರ್ಜುನ್‌ ಬರೆದಿದ್ದು ವಾಣಿ ಹರಿಕೃಷ್ಣ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ನಾಯಕ ನಾಯಕಿ ದೂರ ಆದಾಗ ನಾಯಕಿ ನಾಯಕನನ್ನು ಬಿಟ್ಟು ಹೋಗಲಾರದೆ ನೋವಿನಿಂದ ಹಾಡುವ ವಿಷಾದ ಗೀತೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ಮುಸ್ಸಂಜೆ ವೇಳೇಲಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ವಾಣಿ ಹರಿಕೃಷ್ಣ
  • ಸಾಹಿತ್ಯ : ಎ.ಪಿ.ಅರ್ಜುನ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Mussanje Veleli Song Lyrics in Kannada

ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲಾ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆಯಿದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ
ಒಲವಿಲ್ಲದಾ ಒಡಲೆಲ್ಲಿದೆ…
ತಾಯಿಲ್ಲದಾ ಮಡಿಲೆಲ್ಲಿದೆ…
ಕಣ್ಣೀರಿಗು ಒಂದು ಕೊನೆಯಾ ಆಸೆ ಇದೆ
ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತಿದೆ
ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲಾ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆಯಿದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ

ನಿನ್ನಾಣೆಗು ಗೊತ್ತಿಲ್ಲಾ ಈ ಒಂಟಿಯ ಹೊಸ ಆಟ
ಕಳೆದೋಗೊ ಮುನ್ನ ಕೈ ಸೇರಬಾರದೇ
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿನಾ
ಏನೆಂದು ನೀನೊಮ್ಮೆ ಕೇಳಬಾರದೆ
ಹಳೆ ಜಾಗ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ
ಎದೆಗೂಡ ಗಡಿಯಾರ ನೀನಿಲ್ಲದೆ ನಡೆಯಲ್ಲ
ಚೂರಾಗದ ಮನಸೆಲ್ಲಿದೆ….
ಚೂರಾದರೂ ಮನಸು ಇದೆ….
ಆ ಮುತ್ತಿಗು ಹಣೆಯಾ ಮುಟ್ಟಿದ ನೆನಪು ಇದೆ….
ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಕೇಳುತಿದೆ
ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲಾ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆಯಿದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ

ಎದೆ ಮೇಲೆ ಮಾಡಿದ್ದ ಆ ಆಣೆಗು ಭಾಷೆಗೂ
ಬಲವಿದ್ದರೆ ಒಲವನ್ನು ಕಾಯಬಾರದೆ
ಉಸಿರೋಗೋ ಮುಂಚೇನೆ ಹೃದಯಕ್ಕೆ ತಾಯಾಗಿ
ಬಡಿತಗಳ ಕೈತುತ್ತ ನೀಡಬಾರದೆ
ಹೆಸರನ್ನು ಬರೆದಿದ್ದ ಆ ಗೋಡೆಗು ಉಸಿರಿಲ್ಲ
ಮನಸಾರೆ ಅಳಿಸೋಕೆ ಇದು ಬೊಂಬೆಯ ಕನಸಲ್ಲ
ಈಗಾಗಲೇ ನೋವಾಗಿದೆ…
ದೂರಾಗಲೂ ಭಯವಾಗಿದೆ…
ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತಿದೆ
ನನ ಕನಸಿನ ಪೆಟ್ಟಿಗೆ ಬೀಗವು ಬೀಳುತಿದೆ
ಓ… ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾಣೆ
ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲಾ
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೊರಡೋಕೆ
ಜೊತೆಯಿದ್ದ ನೆರಳಿಗು ಯಾಕೋ ಇಷ್ಟ ಇಲ್ಲಾ

Mussanje Veleli Song Lyrics in English

Mussanje Veleli Mutthitta Usirane
Bittogo Daariyalli Khushiye Illa
Ottaada Hejjena Kitthittu Horadoke
Jotheyidda Neraligu Yaako Ishta Illaa
Olavilladaa Odalellide…
Thaayilladaa Madilellide…
Kannirigu Ondu Koneyaa Aase Ide
Kannillada Preethi Kelade Saayuthide
Mussanje Veleli Mutthitta Usirane
Bittogo Daariyalli Khushiye Illa
Ottaada Hejjena Kitthittu Horadoke
Jotheyidda Neraligu Yaako Ishta Illaa

Ninnaanegu Gotthillaa Ee Ontiya Hosa Aata
Kaledogo Munna Kai Serabaarade
Maathillade Kunthidda Aa Mounada Manavina
Enendu Neenomme Kelabaarade
Hale Jaaga Hosa Novu Dina Kaleyalu Gotthilla
Edeguda Gadiyara Neenillade Nadeyalla
Chooragada Manasellide…
Chooradaru Manasu Ide…
Aa Mutthigu Haneyaa Muttida Nenapu Ide…
Hane Muttida Thappige Shiksheya Keluthide
Mussanje Veleli Mutthitta Usirane
Bittogo Daariyalli Khushiye Illa
Ottaada Hejjena Kitthittu Horadoke
Jotheyidda Neraligu Yaako Ishta Illaa
Ede Mele Maadidda Aa Aanegu Bhashegu
Balaviddare Olavannu Kaayabarade
Usirogo Munchene Hrudayakke Thaayagi
Badithagala Kai Thuttha Needabaarade
Hesarannu Baredidda Aa Godegu Usirilla
Manasaare Alisoke Idu Bombeya Kanasalla
Eegaagale Novagide…
Dooragalu Bhayavagide…
Ninnottige Kaleda Nenape Kaaduthide
Nana Kanasina Pettige Beegavu Beeluthide
O… Mussanje Veleli Mutthitta Usirane
Bittogo Daariyalli Khushiye Illa
Ottaada Hejjena Kitthittu Horadoke
Jotheyidda Neraligu Yaako Ishta Illaa

Song Details :

  • Song Name : Mussanje Veleli
  • Movie Name : Addhuri
  • Released On : 15 July 2012
  • Cast : Dhruva Sarja, Radhika Pandith, Thabala Nani
  • Music : V.Harikrishna
  • Singer : Vani Harikrishna
  • Lyricist : A.P.Arjun
  • Producer : CMR Shankra Reddy
  • Director : A.P.Arjun
  • Audio Label : Anand Audio

LEAVE A REPLY

Please enter your comment!
Please enter your name here