Home Lyrics Nenapidu Nenapidu Song Lyrics in Kannada – Prithvi

Nenapidu Nenapidu Song Lyrics in Kannada – Prithvi

50
5
Nenapidu Nenapidu Song Kannada Lyrics

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಪರ್ವತಿ ತಿರುವೊತ್ತು ನಟಿಸಿರುವ ಪೃಥ್ವಿ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಕೆ.ಕಲ್ಯಾಣ್‌ ಬರೆದಿದ್ದು ಕಾರ್ತಿಕ್‌, ಶೃತಿ ಹಾಸನ್‌ ಹಾಡಿದ್ದಾರೆ, ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದಾರೆ, ನಾಯಕಿಯ ಡ್ರೀಮ್‌ ಸಾಂಗ್‌, ನಾಯಕ ಸಂತೋಷದಲ್ಲಿರುವುದನ್ನು ಕಂಡು ನಾಯಕಿ ಅವನ ಜೊತೆ ತಾನು ರೊಮ್ಯಾಂಟಿಕ್‌ ಡ್ಯುಯೆಟ್‌ ಹಾಡನ್ನು ನೆನಪು ಮಾಡಿಕೊಳ್ಳುವುದು. ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Prithvi :

  • ಹಾಡು : ನೆನಪಿದು ನೆನಪಿದು
  • ಸಂಗೀತ : ಮಣಿಕಾಂತ್‌ ಕದ್ರಿ
  • ಗಾಯನ : ಕಾರ್ತಿಕ್‌, ಶೃತಿ ಹಾಸನ್‌
  • ಸಾಹಿತ್ಯ : ಕೆ.ಕಲ್ಯಾಣ್

Nenapidu Nenapidu Song Lyrics in Kannada

ನೀ ನಕ್ಕರೆ ಬೆಲ್ಲ ಸಕ್ಕರೆಯೇಯೋ
ನಿನ ಕಂಡರೆ ನಿಲ್ಲದ ಅಕ್ಕರೆಯೋ
ನಿನ ಎದೆಯಲಿ ಎಂದಿಗೂ ಆಸರೆಯೋ
ಕೈ ಸೋಕಿದ ತಕ್ಷಣ ಕೈ ಸೆರೆಯೋ

ನೆನಪಿದು ನೆನಪಿದು ಕನಸಲೂ ಮರೆಯದ ನೆನಪಿದು
ಮನಸಿನ ಮರೆಯಲಿ ಮಿನುಗುವ ಹೊಸ ಹೊಸ ನೆನಪಿದು
ನೆನ್ನೆಗೂ ನಾಳೆಗೂ ಮೀರಿದ ಸುಂದರ ಹಾಡಿದು
ಹಾಡಲೆ ಲೋಕವ ಸುತ್ತುವ ಪಯಣವು ನಮ್ಮದು
ನಿನ್ನ ಒಂದೇ ಒಂದು ಸಣ್ಣ ಮುಗುಳು ನಗೆಯಾ
ಕಂಡು ಪೂರ್ಣಚಂದ್ರ ತುಂಬಿಕೊಂಡ ಎದೆಯಾ
ಒಂದು ಪ್ರೀತೀಯ ಮಾತಿಗೆ ಬರೆದಿಡುವೆ ಈ ಪೃಥ್ವಿಯಾ

ನೆನಪಿದು ನೆನಪಿದು ಕನಸಲೂ ಮರೆಯದ ನೆನಪಿದು
ಮನಸಿನ ಮರೆಯಲಿ ಮಿನುಗುವ ಹೊಸ ಹೊಸ ನೆನಪಿದು

ನೂರಾರು ಕೋಗಿಲೆ ಒಟ್ಟಾಗಿ ಹಾಡಿವೆ
ಗುಟ್ಟಾಗಿ ನೀನು ಬರೆದಿಟ್ಟಿರುವ ಪ್ರೇಮಗೀತೆ
ಆ ಪ್ರೇಮಗೀತೆಯ ಪ್ರತಿಯೊಂದು ಅಕ್ಷರ
ನೀ ನೀಡಿದಂತ ಮುತ್ತು ತಾನೆ ಅದಕೆ ಸೋತೆ
ಕಣ್ಣೊಳಗೆ ಬರೆದಿರುವೆ ಕತೆ ಓದುವ ಬಾ ಜೊತೆ
ಚರಿತೆಯಲಿ ಬರೆದಿಟ್ಟಾಗಿದೆ ಜನುಮದ ಜೊತೆ
ನಿನ್ನ ನೆರಳನ್ನ ಕೂಡಿಟ್ಟು ಬೆಳಕಿಗೆ ಬೆಲೆ ಕಟ್ಟುವೆ

ನೆನಪಿದು ನೆನಪಿದು ಕನಸಲೂ ಮರೆಯದ ನೆನಪಿದು
ಮನಸಿನ ಮರೆಯಲಿ ಮಿನುಗುವ ಹೊಸ ಹೊಸ ನೆನಪಿದು

ನೀ ನಕ್ಕರೆ ಬೆಲ್ಲ ಸಕ್ಕರೆಯೇಯೋ
ನಿನ ಕಂಡರೆ ನಿಲ್ಲದ ಅಕ್ಕರೆಯೋ
ಹೃದಯಾನ ತೆರೆಯುವೆ ಜಗವನ್ನೆ ಮರೆಯುವೆ
ಪ್ರತಿದಿಕ್ಕು ಕೇಳಬೇಕು ನಮ್ಮ ಪ್ರೀತಿ ಹಾಡು
ಪ್ರತಿಯೊಂದು ಯುಗದಲೂ ನಿನಗಾಗಿ ಹುಟ್ಟುವೆ
ನನ್ನ ಪ್ರಾಣಪಕ್ಷಿಗಾಗಿ ನೀಡು ಎದೆಯಗೂಡು
ಬದುಕೆಂಬ ನದಿಯೊಳಗೆ ಇದೆ ಕನಸುಗಳ ಅಲೆ
ಅಲೆಗಳನು ತಲೆ ಕಾಯುವುದೇ ಹೃದಯದ ಕಲೆ
ನೋಡು ಆಕಾಶದ ಪೂರ ನಮಗಿಬ್ಬರಿಗಿದು ಹೂ ಮಳೆ

ನೆನಪಿದು ನೆನಪಿದು ಕನಸಲೂ ಮರೆಯದ ನೆನಪಿದು
ಮನಸಿನ ಮರೆಯಲಿ ಮಿನುಗುವ ಹೊಸ ಹೊಸ ನೆನಪಿದು
ನೆನ್ನೆಗೂ ನಾಳೆಗೂ ಮೀರಿದ ಸುಂದರ ಹಾಡಿದು
ಹಾಡಲೆ ಲೋಕವ ಸುತ್ತುವ ಪಯಣವು ನಮ್ಮದು
ನಿನ್ನ ಒಂದೇ ಒಂದು ಸಣ್ಣ ಮುಗುಳು ನಗೆಯಾ
ಕಂಡು ಪೂರ್ಣಚಂದ್ರ ತುಂಬಿಕೊಂಡ ಎದೆಯಾ
ಒಂದು ಪ್ರೀತಿಯ ಮಾತಿಗೆ ಬರೆದಿಡುವೆ ಈ ಪೃಥ್ವಿಯಾ

ನೀ ನಕ್ಕರೆ ಬೆಲ್ಲ ಸಕ್ಕರೆಯೇಯೋ
ನಿನ ಕಂಡರೆ ನಿಲ್ಲದ ಅಕ್ಕರೆಯೋ
ನಿನ ಎದೆಯಲಿ ಎಂದಿಗೂ ಆಸರೆಯೋ
ಕೈ ಸೋಕಿದ ತಕ್ಷಣ ಕೈ ಸೆರೆಯೋ

Nenapidu Nenapidu Song Lyrics in English

Nee Nakkare Bella Sakkareyeyo
Nina Kandare Nillada Akkareyo
Nina Edeyali Endigu Aasareyo
Kai Sokida Thakshana Kai Sereyo

Nenapidu Nenapidu Kanasalu Mareyada Nenapidu
Manasina Mareyali Minuguva Hosa Hosa Nenapidu
Nennegu Naalegu Meerida Sundara Haadidu
Haadale Lokava Suthuva Payanavu Nammadu
Ninna Onde Ondu Sanna Mugulu Nageyaa
Kandu Poornachandra Thumbikonda Edeyaa
Ondu Preethiya Maathige Barediduve Ee Prithviyaa

Nenapidu Nenapidu Kanasalu Mareyada Nenapidu
Manasina Mareyali Minuguva Hosa Hosa Nenapidu

Nooraru Kogile Ottagi Haadive
Guttagi Neenu Baredittiruva Premageethe
Aa Prema Geetheya prathiyondu Akshara
Nee Needidantha Muthu Thaane Adake Sothe
Kannolage Barediruve Kathe Oduva Baa Jothe
Charitheyali Baredittaagide Janumada Jothe
Ninna Neralanna Koodittu Belakige Bele Kattuve

Nenapidu Nenapidu Kanasalu Mareyada Nenapidu
Manasina Mareyali Minuguva Hosa Hosa Nenapidu

Nee Nakkare Bella Sakkareyeyo
Nina Kandare Nillada Akkareyo
Hrudayana Tereyuve Jagavanne Mareyuve
Prathidikku Kelabeku Namma Preethi Haadu
Prathiyondu Yugadalu Ninagaagi Huttuve
Nanna Praanapakshigaagi Needu Edeyagoodu
Badukemba Nadiyolage Ide Kanasugala Ale
Alegalanu Thale Kaayuvude Hrudayada Kale
Nodu Akashada Poora Namagibbarigidu Hoo Male

Nenapidu Nenapidu Kanasalu Mareyada Nenapidu
Manasina Mareyali Minuguva Hosa Hosa Nenapidu
Nennegu Naalegu Meerida Sundara Haadidu
Haadale Lokava Suthuva Payanavu Nammadu
Ninna Onde Ondu Sanna Mugulu Nageyaa
Kandu Poornachandra Thumbikonda Edeyaa
Ondu Preethiya Maathige Barediduve Ee Prithviyaa

Nee Nakkare Bella Sakkareyeyo
Nina Kandare Nillada Akkareyo
Nina Edeyali Endigu Aasareyo
Kai Sokida Thakshana Kai Sereyo

Song Details :

  • Song Name : Nenapidu Nenapidu
  • Movie Name : Prithvi
  • Cast : Powerstar Puneeth Rajkumar, Parvathy Thiruvothu, Avinash, Srinivas Murthy
  • Released On : 23 April 2010
  • Music : Manikanth Kadri
  • Singer : Karthik., Shruthi Hassan
  • Lyricist : K.Kalyan
  • Director : Jacob Verghese
  • Producer : M.B.Babu
  • Audio Label / Credits : Anand Audio

5 COMMENTS

LEAVE A REPLY

Please enter your comment!
Please enter your name here