Home Lyrics Ninagende Visheshavada Song Lyrics in Kannada – Prithvi

Ninagende Visheshavada Song Lyrics in Kannada – Prithvi

46
1
Ninagende Visheshavada Song Kannada Lyrics

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಪರ್ವತಿ ತಿರುವೊತ್ತು ನಟಿಸಿರುವ ಪೃಥ್ವಿ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಕುನಾಲ್‌ ಗಾಂಜಾವಾಲ, ಹಂಸಿಕಾ ಅಯ್ಯರ್ ಹಾಡಿದ್ದಾರೆ, ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದಾರೆ, ನಾಯಕಿಯ ಡ್ರೀಮ್‌ ಸಾಂಗ್‌, . ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Prithvi :

 • ಹಾಡು : ನಿನಗೆಂದೇ ವಿಶೇಷವಾದ
 • ಸಂಗೀತ : ಮಣಿಕಾಂತ್‌ ಕದ್ರಿ
 • ಗಾಯನ : ಕುನಾಲ್‌ ಗಾಂಜಾವಾಲ, ಹಂಸಿಕಾ ಅಯ್ಯರ್
 • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Ninagende Visheshavada Song Lyrics in Kannada

ಒಹೋಓ…ಓ ಒಹೋಓ…ಓ ಒಹೋಓ…ಓ
ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ
ನಿನಗಿಂತ ವಿಶೇಷವಾದ ಸಂಗತಿ ಇನ್ನೆಲ್ಲಿ
ಈಗ ಮಾತನಾಡದೇ ಏನನೂ ನೀನು ಕೂತಿರು ಕಣ್ಣಲ್ಲಿ
ನನಗಂತೂ ವಿಶೇಷವಾದ ಅಕ್ಕರೆ ನಿನ್ನಲ್ಲಿ
ನಿನಗಿಂತಾ ವಿಶೇಷವಾದ ಅಕ್ಕರೆ ಇನ್ನೆಲ್ಲಿ
ಈಗ ನೀನು ಎಲ್ಲಿಯೇ ಹೋದರೂ ನಾನು ಹಾಜರು ಬೆನ್ನಲ್ಲಿ

ನೀ ನೋಡುತ ಮೈಯ್ಯ ಮರೆವಾಗ ಸಂತೋಷವೇ ರೂಪುಗೊಂಡಂತೆ
ಈ ತೋಳಿನ ಬಂಧ ದೊರೆತಾಗ ಮುಂಜಾವಲಿ ಕನಸು ಕಂಡಂತೆ
ಕೈಯಲ್ಲಿ ಕೈಯಿದ್ದರೆ ನಮ್ಮ ಹೆಜ್ಜೆ ಒಂದಾಗಿದೆ ಗಡಿಯಾರ ಬಂದಾಗಿದೇ ಒಹೋ… ಓ
ತುಸು ದೂರ ಇದ್ದಾಗಲೇ ನನ್ನ ನಂಟು ಹೆಚ್ಚಾಗಿದೆ ಈಗಂತೂ ಹುಚ್ಚಾಗಿದೆ ಒಹೋ…ಓ

ನಿನಗೆಂದೇ ವಿಶೇಷವಾದ ಮೋಹವೂ ನನ್ನಲ್ಲಿ
ನಿನಗಿಂತ ವಿಶೇಷವಾದ ಜೀವವು ಇನ್ನೆಲ್ಲಿ
ಓಡಾಡಲು ಹೋದ ಮಾತೆಲ್ಲಾ ನೀ ಸೋಕಲು ಮೂರ್ತಿಯಾದಂತೆ
ಮಾತಿಲ್ಲದೆ ಮುದ್ದುಗರೆವಾಗ ಈ ಬಾಯಿಗೆ ಜೀವ ಬಂದಂತೆ
ಬರಿ ನಿನ್ನ ಕುರಿತಾಗಿಯೇ ನನ್ನ ಹೃದಯ ಪರದಾಡಿದೆ
ನಿನ್ನತ್ತ ಸರಿದಾಡಿದೆ ಒಹೋ… ಓ
ಹೊಸದಾಗಿ ನಿನ್ನೊಂದಿಗೇ ಮತ್ತೆ ಮತ್ತೆ ಒಲವಾಗಿದೆ
ಇನ್ನೂನು ಬಲವಾಗಿದೇ ಒಹೋ… ಓ

ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ
ನಿನಗಿಂತ ವಿಶೇಷವಾದ ಸಂಗತಿ ಇನ್ನೆಲ್ಲಿ
ಈಗ ಮಾತನಾಡದೇ ಏನನೂ ನೀನು ಕೂತಿರು ಕಣ್ಣಲ್ಲಿ

Ninagende Visheshavada Song Lyrics in English

Oho O…o Oho O…o Oho O…o
Ninagende Visheshavada Maahithi Nannalli
Ninagintha Visheshavada Sangathi Innelli
Eega Maathanadade Enanu Neenu Koothiru Kannalli
Nanaganthu Visheshavada Akkare Ninnalli
Ninagintha Visheshavada Akkare Innelli
Eega Neenu Elliye Hodaru Naanu Haajaru Bennalli

Nee Nodutha Maiyya Marevaga Santhoshave Roopugondanthe
Ee Tholina Bandha Dorethaga Munjavali Kanasu Kandanthe
Kaiyali Kaiyiddare Namma Hejje Ondagide Gadiyara Bandagide Oho…o
Thusu Doora Iddagale Nanna Nantu Hecchagide Eeganthu Hucchagide Oho…o

Ninagende Visheshavada Mohavu Nannalli
Ninagintha Visheshavada Jeevavu Innelli
Odaadalu Hoda Maathella Nee Sokalu Murthy-yadanthe
Maathillade Muddugarevaga Ee Baayige Jeeva Bandanthe
Bari Ninna Kurithagiye Nanna Hrudaya Paradaadide
Ninnatha Saridaadide Oho…o

Ninagende Visheshavada Maahithi Nannalli
Ninagintha Visheshavada Sangathi Innelli
Eega Maathanadade Enanu Neenu Koothiru Kannalli

Song Details :

 • Song Name : Ninagende Visheshavada
 • Movie Name : Prithvi
 • Cast : Powerstar Puneeth Rajkumar, Parvathy Thiruvothu, Avinash, Srinivas Murthy
 • Released On : 23 April 2010
 • Music : Manikanth Kadri
 • Singer : Kunal Ganjawala, Hamsika Iyer
 • Lyricist : Jayanth Kaikini
 • Director : Jacob Verghese
 • Producer : M.B.Babu
 • Audio Label / Credits : Anand Audio

1 COMMENT

LEAVE A REPLY

Please enter your comment!
Please enter your name here