Home Lyrics Kannada O Nalmeya Navikane Song Lyrics in Kannada – Junglee

O Nalmeya Navikane Song Lyrics in Kannada – Junglee

85
1
O Nalmeya Navikane Song Kannada Lyrics

ದುನಿಯಾ ವಿಜಯ್‌ ಮತ್ತು ಐಂದ್ರಿತಾ ರಾಯ್‌ ಅಭಿನಯದ ಜಂಗ್ಲಿ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಎಂ.ಡಿ.ಪಲ್ಲವಿ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ನಾಯಕನ ಬರುವಿಕೆಗಾಗಿ ಕಾಯುತ್ತಿರುವ ನಾಯಕಿ ಹಾಡುವ ವಿರಹ ಗೀತೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Junglee :

  • ಹಾಡು : ಓ ನಲ್ಮೆಯ  ನಾವಿಕನೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಎಂ.ಡಿ.ಪಲ್ಲವಿ
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

O Nalmeya Navikane Song Lyrics in Kannada

ಓ ನಲ್ಮೆಯ ನಾವಿಕನೆ ಎಂದೂ ನಿನ್ನ ಆಗಮನ
ನೀ ಎಲ್ಲಿಯೇ ಅಡಗಿದರೂ ಅಲ್ಲೇ ನನ್ನ ಈ ಗಮನ
ಈ ಪ್ರೀತಿಯ ಪರಿಣಾಮ ನಿನಗೂ ಕೂಡಾ ಹೀಗೇನಾ?
ಓ ನಲ್ಮೆಯಾ ನಾವಿಕನೆ ಎಂದೂ ನಿನ್ನ ಆಗಮನ?
ಆಹಾ ಎಂದೂ ನಿನ್ನ ಆಗಮನ?

ಕರೆದುಬಿಡು ನನ್ನ ನೀ ಬೇಗ ಬರೆದುಕೊಡು ಎಲ್ಲ ಆ ವೇಗ
ಮೆರುಗುತಿದೆ ಜೀವ ನೋಡೀಗ ಏನು ಕಾರಣ
ನನ್ನ ಪಾಡಿಗಿಲ್ಲಿ ನಾನು ನಿನ್ನ ಹಾಡು ಹಾಡಲೇನು
ನಿನ್ನ ಊರಿನಿಂದ ಬಂದ ದಾರಿಯನ್ನೇ ನೋಡಲೇನು
ಹಚ್ಚಿಕೊಂಡ ಹುಚ್ಚಿ ನಾನು ನೀನೂ ಹೀಗೇನಾ
ಓ ನಲ್ಮೆಯಾ ನಾವಿಕನೇ ಎಂದು ನಿನ್ನ ಆಗಮನ
ನೀ ಎಲ್ಲೆಯೇ ಅಡಗಿದರೂ ಅಲ್ಲೇ ನನ್ನ ಈ ಗಮನ

ನಡೆಯುತಿರುವಾಗ ಜೊತೆ ನೀನು ಹಿಡಿದುಕೊಳಲೇನು ಕೈಯ್ಯನ್ನು
ತಡೆಯದಿರು ಯಾವ ಮಾತನ್ನು ನೀನು ಈ ದಿನಾ
ಬೇರೆಯೇನು ಕಾಣಲಾರೆ ಒಮ್ಮೆ ನೀನು ಕಂಡ ಮೇಲೆ
ಬಾಕಿ ನೂರು ಮಾತನೆಲ್ಲಾ ಮೌನದಲ್ಲೆ ಅಂದಮೇಲೆ
ಮೋಹದಲ್ಲಿ ಮೂಕಿ ನಾನು ನೀನೂ ಹೀಗೇನಾ?

ಓ ನಲ್ಮೆಯ ನಾವಿಕನೆ ಎಂದೂ ನಿನ್ನ ಆಗಮನ
ನೀ ಎಲ್ಲಿಯೇ ಅಡಗಿದರೂ ಅಲ್ಲೇ ನನ್ನ ಈ ಗಮನ
ಈ ಪ್ರೀತಿಯ ಪರಿಣಾಮ ನಿನಗೂ ಕೂಡಾ ಹೀಗೇನಾ?
ಓ ನಲ್ಮೆಯಾ ನಾವಿಕನೆ ಎಂದೂ ನಿನ್ನ ಆಗಮನ?
ಆಹಾ ಎಂದೂ ನಿನ್ನ ಆಗಮನ?

O Nalmeya Navikane Song Lyrics in English

O Nalmeya Naavikane Endu Ninna Aagamana
Nee Elliye Adagidaru Alle Nanna Ee Gamana
Ee Preethiya Parinama Ninagu Kuda Heegenaa?
O Nalmeya Naavikane Endu Ninna Aagamana
Aha Endu Ninna Aagamana

Karedubidu Nanna Nee Bega Baredukodu Ella Avega
Merugutide Jeeva Nodiga Enu Kaarana
Nanna Paadigilli Naanu Ninna Haadu Haadalenu
Ninna Oorininda Banda Daariyanne Nodalenu
Hacchikonda Hucchi Naanu Neenu Heegenaa
O Nalmeyaa Naavikane Endu Ninna Aagamana
Nee Elliye Adagidaru Alle Nanna Ee Gamana

Nadeyuthiruvaga Jothe Neenu Hiddidukolalenu Kaiyyannu
Thadeyadiru Yaava Maathannu Neenu Ee Dinaa
Bereyenu Kaanalaare Omme Neenu Kanda Mele
Baaki Nooru Maathanella Mounadalle Andamele
Mohadalli Mooki Naanu Neenu Heegenaa

O Nalmeyaa Naavikane Endu Ninna Aagamana
Nee Elliye Adagidaru Alle Nanna Ee Gamana
Ee Preethiyaa Parinama Ninagu Kooda Heegenaa
O Nalmeyaa Naavikane Endu Ninna Aagamana
Aha Endu Ninna Aagamana

Song Details :

  • Song Name : O Nalmeya Navikane
  • Movie Name : Junglee
  • Released On : 6 February 2009
  • Cast : Duniya Vijay, Rangayana Raghu, Aindrita Roy, Avinash, Aadi Lokesh, Suresh Chandra
  • Music : V.Harikrishna
  • Singers : M.D.Pallavi
  • Lyrics : Jayanth Kaikini
  • Producer : Rockline Venkatesh
  • Director : Duniya Suri
  • Music Label Credits : Anand Audio

1 COMMENT

LEAVE A REPLY

Please enter your comment!
Please enter your name here