Home Lyrics Kannada Rhythm Ide Song Lyrics in Kannada – Savaari

Rhythm Ide Song Lyrics in Kannada – Savaari

47
1
Rhythm Ide Song Kannada Lyrics

ರಘು ಮುಖರ್ಜಿ, ಶ್ರೀನಗರ ಕಿಟ್ಟಿ & ಕಮಲಿನಿ ಮುಖರ್ಜಿ ನಟಿಸಿರುವ ಸವಾರಿ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ರಂಜಿತ್‌ ಹಾಡಿದ್ದಾರೆ, ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ, ನಾಯಕ ಜಾಲಿ ಮೂಡಲ್ಲಿರುವಾಗ ಬರುವ ಹಾಡು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Savaari :

  • ಹಾಡು : ರಿದಮ್‌ ಇದೆ
  • ಸಂಗೀತ : ಮಣಿಕಾಂತ್‌ ಕದ್ರಿ
  • ಗಾಯನ : ರಂಜಿತ್‌
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್

Rhythm Ide Song Lyrics in Kannada

ರಿದಮ್‌ ಇದೆ ಲೈಫಿನ ಜಾಲಿ ರೈಡಲಿ
ತರ ತರ ಕಾತರ ಎಲ್ಲರೆದೆಯಲಿ
ಎಲ್ಲಿದೆ ಶಾಂತಿ ಎಲ್ಲ ಮನಸಲಿ
ಬಾಳೆ ಹುಡುಗಾಟವು
ತಕದಿಮಿ ಕುಣಿಯುವ ವಯಸು ಮೂಡಿದೆ
ಜಗಮಿಸೊ ಕನಸನು ಹಿಡಿಯ ಹೊರಟಿದೆ
ಕನಸ ಹರಸುತಾ ಜೀವನ ಸಾಗಿದೆ
ಬಾಳೆ ಹೋರಾಟವು
ಮನಸಾರೆ ಮಾತು ಮೂಡಿ ಮೀಟಿ ಮೇಟಿ ಬಾಳಗಾನ ರಮ್ಯ
ಮನಸೀಗ ಮಾತು ಮೀರಿ ಹಾದಿ ದಾಟಿ ಜೀವನಾದ ಶೂನ್ಯ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬುತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ
ರಿದಮ್‌ ಇದೆ ಲೈಫಿನ ಜಾಲಿ ರೈಡಲಿ
ತರ ತರ ಕಾತರ ಎಲ್ಲರೆದೆಯಲಿ
ಎಲ್ಲಿದೆ ಶಾಂತಿ ಎಲ್ಲ ಮನಸಲಿ
ಬಾಳೆ ಹುಡುಗಾಟವು

ಮರು ಜನ್ಮದ ಕನಸು
ಹುಡುಕಾಡಿದೆ ಮನಸು
ತಡಕಾಡಿದೆ ಜೀವ
ಹುಸಿ ಎಂದಿದೆ ಭಾವ
ಇಲ್ಲಿ ಇರುವುದೇ ಜನ್ಮ
ತೀರಿಸುವುದೆಲ್ಲರ ಧರ್ಮ
ಎದೆಯ ಕದವನು ತೆರೆದು
ಈ ಪ್ರೀತಿಧಾರೆಯು ಹರಿದು
ಕಾಮ ಕ್ರೋಧವು ಲೋಭ ಮೋಹವು
ಮದದ ಮಾತ್ಸರ್ಯವೆಲ್ಲಾ
ಸ್ಥಿಮಿತವಾಗಿಯೇ ಇರಲಿ ಮಿತದಲಿ
ಅಮಿತ ಆನಂದ ಬಾಳಲಿ ಬರಲಿ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬುತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ

ಹೂ ಮುಳ್ಳಲಿ ಅರಳಿ ತಂಪೆರೆಯುವ ಪ್ರೀತಿ
ಸಿಹಿಯಾಗಿರದೆಂದು ಕಹಿ ಅನಿಸದು ಎಂದೂ
ಪ್ರೀತಿ ಅರಸುತಾ ವಿರಹಿ ಚಳಿ ಬಿಸಿಲು ಮಳೆಯಲಿ ಬಳಲಿ
ಪ್ರೇಮ ಅವರಲಿ ಅರಳಿ ಹೊಸ ಒಲವ ಕಿರಣವ ಚೆಲ್ಲಿ
ಮನದ ಬಾಂದಳದಿ ನೋವು ನಲವಿನ ಕನಸು ಕಲ್ಪನೆ ಸವಾರಿ
ಬಿಡದ ಮಾಯೆಯ ಬೆನ್ನು ಹಿಡಿಯುವ
ಬಯಕೆ ಯಾಕೆ ನಮ್ಮ ನಿಮ್ಮಲಿ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬುತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ
ರಿದಮ್‌ ಇದೆ ಲೈಫಿನ ಜಾಲಿ ರೈಡಲಿ
ತರ ತರ ಕಾತರ ಎಲ್ಲರೆದೆಯಲಿ
ಎಲ್ಲಿದೆ ಶಾಂತಿ ಎಲ್ಲ ಮನಸಲಿ
ಬಾಳೆ ಹುಡುಗಾಟವು
ಮನಸಾರೆ ಮಾತು ಮೂಡಿ ಮೀಟಿ ಮೇಟಿ ಬಾಳಗಾನ ರಮ್ಯ
ಮನಸೀಗ ಮಾತು ಮೀರಿ ಹಾದಿ ದಾಟಿ ಜೀವನಾದ ಶೂನ್ಯ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬುತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ

Rhythm Ide Song Lyrics in English

Rhythm Ide Life-ina Jolly Ride-ali
Thara Thara Kathara Ellaredeyali
Ellide Shanthi Ella Manasali
Baale Hudugaatavu
Thakadimi Kuniyuva Vayasu Moodide
Jagamiso Kanasanu Hidiya Horatide
Kanasa Harasutha Jeevana Saagide
Baale Horatavu
Manasaare Maathu Mudi Meeti Meti Baalagana Ramya
Manaseega Maathu Meeri Haadi Daati Jeevanada Shoonya
Baaladariyali Onti Jeeva Payana
Baanadariyali Onti Surya Prayana
Khali Baanina Thumbuthare Thanana
Khali Baalina Novu Naliva Kadana
Rhythm Ide Life-ina Jolly Ride-ali
Thara Thara Kaathara Ellaredeyali
Ellide Shanthi Ella Manasali
Baale Hudugaatavu

Maru Janmada Kanasu
Hudukaadide Manasu
Thadakaadide Jeeva
Husi Endide Bhaava
Illi Iruvude Janma
Theerisuvudellara Dharma
Edeya Kadavanu Theredu
Ee Preethidhareyu Haridu
Kaama Krodhavu Lobha Mohavu
Madada Maathsaryavella
Sthimithavagiye Irali Mithadali
Amitha Ananda Baalali Barali
Baaladariyali Onti Jeeva Payana
Baanadariyali Onti Surya Prayana
Khali Baanina Thumbuthare Thanana
Khali Baalina Novu Naliva Kadana

Hoo Mullali Arali Thampereyuva Preethi
Sihiyagiradendu Kahi Anisadu Endu
Preethi Arasutha Virahi Chali Bisilu Maleyali Balali
Prema Avarali Arali Hosa Olava Kiranava Chelli
Manada Baandaladi Novu Olavina Kanasu Kalpane Savaari
Bidada Maayeya Bennu Hidiyuva
Bayake Yaake Namma Nimmali
Baaladariyali Onti Jeeva Payana
Baanadariyali Onti Surya Prayana
Khali Baanina Thumbuthare Thanana
Khali Baalina Novu Naliva Kadana
Rhythm Ide Life-ina Jolly Ride-ali
Thara Thara Kaathara Ellaredeyali
Ellide Shanthi Ella Manasali
Baale Hudugaatavu
Manasaare Maathu Mudi Meeti Meti Baalagana Ramya
Manaseega Maathu Meeri Haadi Daati Jeevanada Shoonya
Baaladariyali Onti Jeeva Payana
Baanadariyali Onti Surya Prayana
Khali Baanina Thumbuthare Thanana
Khali Baalina Novu Naliva Kadana

Song Details :

  • Song Name : Rhythm Ide
  • Movie Name : Savaari
  • Released On : 10 April 2009
  • Cast : Raghu Mukharji, Kamalini Mukharji, Loose Maada
  • Music : Manikanth Kadri
  • Singers : Ranjith
  • Lyricist : Dr.V.Nagendra Prasad
  • Director : Jacob Varghese
  • Producer : Ramoji Rao
  • Audio Label Credits : Anand Audio

1 COMMENT

LEAVE A REPLY

Please enter your comment!
Please enter your name here