Home Lyrics Sanju Mathu Geetha Song Lyrics in Kannada – Sanju weds Geetha

Sanju Mathu Geetha Song Lyrics in Kannada – Sanju weds Geetha

42
0
Sanju mathu Geetha Song Kannada Lyrics

ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಅಭಿನಯದ ಸಂಜು ವೆಡ್ಸ್‌ ಗೀತಾ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಸೋನು ನಿಗಮ್‌, ಶ್ರೇಯಾ ಘೋಷಾಲ್ ಹಾಡಿದ್ದಾರೆ, ಚಿತ್ರಕ್ಕೆ ಜೆಸ್ಸಿ ಗಿಫ್ಟ್‌ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಸಂಜು ಮತ್ತು ಗೀತಾ
  • ಸಂಗೀತ : ಜೆಸ್ಸಿ ಗಿಫ್ಟ್‌
  • ಗಾಯನ : ಸೋನು ನಿಗಮ್‌, ಶ್ರೇಯಾ ಘೋಷಾಲ್
  • ಸಾಹಿತ್ಯ : ಕವಿರಾಜ್

Sanju Mathu Geetha Song Lyrics in Kannada

ಹ್ಞಂ… ಹ್ಞಂ… ಹ್ಞಂ… ಹ್ಞಂ…
ಆ… ಆ… ಆ… ಆ… ಆ…

ಸಂಜು ಮತ್ತು ಗೀತಾ ಸೇರಬೇಕು ಅಂತ…
ಬರೆದಾಗಿದೆ ಇಂದು ಬ್ರಹ್ಮನು
ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತ
ಇರುವಾಗ ನಾನು ಚಿಂತೆಯೇನು
ನಿನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನು
ನನ ಎಲ್ಲ ಖುಷಿಯನ್ನು ಕೊಡುವೆ ನಿನ್ನ ವಶಕಿನ್ನು
ಮಳೆಯಾ ಹನಿ ಉರುಳೋ ದನಿ ತರವೇ
ನಗಬಾರದೇ ನಗಬಾರದೆ ನನ್ನೊಲವೇ
ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು

ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ ನನ ಸಂಗಾತಿ ನೀ
ನಿನ ಈ ಕಣ್ಣಲಿ ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನಾ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೆ
ಮಳೆಯಾ ಹನಿ ಉರುಳೋ ದನಿ ತರವೇ
ನಗಬಾರದೇ ನಗಬಾರದೆ ನನ್ನೊಲವೇ
ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು…

ಕಂಡಿಲ್ಲ ಯಾರೂ ಆ ದೇವರನ್ನು
ಇರಬಹುದೊ ಏನೋ ನಿನ್ನಂತೆ ಅವನು
ಗೆಳೆಯಾ ಎಂದರೆ ಅದಕೂ ಹತ್ತಿರ
ಇನಿಯಾ ಎಂದರೆ ಅದಕೂ ಎತ್ತರ
ಒರಗಿಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು
ಕರಗಿ ಹೋಗಲೇನು ನಿನ್ನ ಕರಗಳಲ್ಲಿ ನಾನು
ಯುಗದಾಚೆಗೂ ಜಗದಾಚೆಗೂ ಜೊತೆಗೆ ಸಾಗುವೇ
ಕಡಲೆಲ್ಲವ ಅಲೆ ಸುತ್ತುವ ತರವೇ
ನಿನ ಸೇರುವೆ ನಿನ ಸೇರುವೆ ನನ್ನೊಲವೇ
ಸಂಜು ಮತ್ತು ಗೀತಾ ಸೇರಬೇಕು ಅಂತ…
ಬರೆದಾಗಿದೆ ಇಂದು ಬ್ರಹ್ಮನು….

Sanju Mathu Geetha Song Lyrics in English

Ham… Ham… Ham… Ham…
Aa… Aa… Aa… Aa… Aa….

Sanju Mathu Geetha Serabeku Antha
Baredagide Indu Bramhanu
Nanna Jeevakkintha Neene Nanna Swantha
Iruvaaga Naanu Chintheyenu
Nina Ella Novannu Koduge Needu Nanaginnu
Nana Ella Khushiyannu Koduve Ninna Vashakinnu
Maleyaa Hani Urulo Dani Tharave
Nagabaarade Nagabaarade Nannolave
Sanju Mathu Geetha Serabeku Antha
Baredagide Indu Bramhanu

Aa Kannigondu Ee Kannigondu
Swargana Thandu Kodalenu Indu
Enaagali Nana Sangaathi Nee
Nina Ee Kannali Ide Koneyaa Hani
Edeya Goodinalli Putta Gubbiyanthe Ninna
Becchaneya Preethi Kottu Bacchi Iduve Chinnaa
Ithihaasada Puta Kaanada Olume Needuve
Maleyaa Hani Urulo Dani Tharave
Nagabaarade Nagabaarade Nannolave
Sanju Mathu Geetha Serabeku Antha
Baredagide Indu Bramhanu…

Kandilla Yaaru Aa Devarannu
Irabahudo Eno Ninnanthe Avanu
Geleyaa Endare Adaku Hathira
Iniyaa Endare Adaku Ethara
Oragikollalenu Ninna Edege Omme Naanu
Karagi Hogalenu Ninna Karagalalli Naanu
Yugadaachegu Jagadaachegu Jothege Saaguve
Kadalellava Ale Suthuva Tharave
Nina Seruve Nina Seruve Nannolave
Sanju Mathu Geetha Serabeku Antha…
Baredagide Indu Bramhanu….

Song Details :

  • Song Name : Sanju mathu Geetha
  • Movie Name : Sanju weds Geetha
  • Released on : 2011
  • Cast : Srinagr Kitty, Ramya, Suhasini, Arun Sagar, Rangayana Raghu, Sadhu Kokila, Sharath Lohithashwa
  • Music Director : Jessie Gift
  • Singer : Sonu Nigam, Shreya Ghoshal
  • Lyrics : Kaviraj
  • Director : Nagashekar
  • Producers : Pramod Narayan, Murali Mohan
  • Audio Label : Anand Audio

LEAVE A REPLY

Please enter your comment!
Please enter your name here