Home Lyrics Thavarige Baa Thangi Song Lyrics in Kannada – Thavarige Baa Thangi

Thavarige Baa Thangi Song Lyrics in Kannada – Thavarige Baa Thangi

72
0
Thavarige Baa Thangi Song Kannada Lyrics

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್‌ ನಟಿಸಿರುವ ತವರಿಗೆ ಬಾ ತಂಗಿ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಕೆ.ಎಸ್.ಚಿತ್ರಾ ಹಾಡಿದ್ದಾರೆ, ಅಣ್ಣ ತನ್ನ ತಂಗಿಯನ್ನು ತವರಿಗೆ ಕರೆಯುವ ಸಾಹಿತ್ಯವನ್ನು ಈ ಹಾಡು ಹೊಂದಿದೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಒಡೆತನದಲ್ಲಿದೆ.

More Songs From Album :

  • ಹಾಡು – ತವರಿಗೆ ಬಾ ತಂಗಿ
  • ಸಂಗೀತ – ಹಂಸಲೇಖ
  • ಗಾಯನ – ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರಾ
  • ಸಾಹಿತ್ಯ – ಹಂಸಲೇಖ

Thavarige Baa Thangi Song Lyrics in Kannada

ಅಣ್ಣಾ… ಅಣ್ಣಾ… ಅಣ್ಣಾ… ಅಣ್ಣಾ…
ತವರಿಗೆ ಬಾ ತಂಗಿ
ತವರಿಗೆ ಬಾ ತಂಗಿ
ತವರಿಗೆ ಬಾ ತಂಗಿ
ತವರಿಗೆ ಬಾ ತಂಗಿ

ಕೊಟ್ಟ ಹೆಣ್ಣು ಕುಲಕ್ಕೆ ಹೊರಗಂತೆ
ಅತ್ತೆ ಮನೆ ತುತ್ತಾದರೂ ಸರಿಯಂತೆ
ಗಂಡ ಬಲ್ಲನೇನು ಅಣ್ಣತಂಗಿ ಮಾತು
ಕೋಪ ನುಂಗಬೇಕೆ ತವರು ತಾನೆ ಸೋತು
ಬಾಲ್ಯ ಚೆಂದವಣ್ಣ
ಬಾಳು ಚಿಂತೆಯಮ್ಮಾ
ತವರಿಗೆ ಬಾ ತಂಗಿ
ತವರಿಗೆ ಬಾ ತಂಗಿ

ಆಆ ಆಆ ಆಆ ಆಆ
ಅಪವಾದ ರಾಹುವಂತೆ
ದೇವರನು ಬಿಡದಂತೆ
ಅಗಸನ ಮಾತು ಅರಸಗೆ ಶೂಲ
ಕೆಡಿಸಿತು ಶಂಕೆ ಸೀತೆಯ ಬಾಳ
ಮನಸಿಗೆ ಸಾಕ್ಷಿ ಮನಸಂತೆ
ಮನಸಿಗೊ ಮಾತೆ ಬರದಂತೆ
ಅಣ್ಣಾ… ಅಣ್ಣಾ… ಅಣ್ಣಾ… ಅಣ್ಣಾ…
ತವರಿಗೆ ಬಾ ತಂಗಿ
ತವರಿಗೆ ಬಾ ತಂಗಿ

ಕಣ್ಣಲ್ಲಿ ಕಣ್ಣಿಟ್ಟು ಸಾಕಿದೆ ನೀ ಉಸಿರಿಟ್ಟು
ತವರಿನ ಉಸಿರ ಹಿಂಡುವರಲ್ಲಾ
ತವರಿನ ನಿದಿರೆ ಕದಿಯುವರಲ್ಲಾ
ಹೆಣ್ಣಿಗೆ ದೈವ ಪತಿಯಂತೆ
ಹೆಣ್ಣಿಗೆ ದೇವರೆ ಗತಿಯಂತೆ
ಕೊಟ್ಟ ಹೆಣ್ಣು ಕುಲಕ್ಕೆ ಹೊರಗಂತೆ
ಅತ್ತೆಯ ಮನೆ ತುತ್ತಾದರೂ ಸರಿಯಂತೆ
ಗಂಡ ಬಲ್ಲನೇನು ಅಣ್ಣ ತಂಗಿ ಮಾತು
ಕೋಪ ನುಂಗಬೇಕೆ ತವರು ತಾನೆ ಸೋತು
ಬಾಲ್ಯ ಚೆಂದವಣ್ಣಾ
ಬಾಳು ಚಿಂತೆಯಮ್ಮಾ
ತವರಿಗೆ ಬಾ ತಂಗಿ
ತವರಿಗೆ ಬಾ ತಂಗಿ

Thavarige Baa Thangi Song Lyrics in English

Annaa… Annaa… Annaa… Annaa…
Thavarige Baa Thangi
Thavarige Baa Thangi
Thavarige Baa Thangi
Thavarige Baa Thangi

Kotta Hennu Kulakke Horaganthe
Athe Mane Thuthadaru Sariyanthe
Ganda Ballanenu Anna Thangi Mathu
Kopa Nungabeke Thavaru Thane Sothu
Baalya Chendavanna
Baalu Chintheyamma
Thavarige Baa Thangi
Thavarige Baa Thangi

AaAa AaAa AaAa AaAa
Apavada Rahuvanthe
Devaranu Bidadanthe
Agasana Mathu Agasage Shoola
Kedisithu Shanke Seetheya Baala
Manasige Saakshi Manasanthe
Manasigu Mathe Baradanthe
Annaa… Annaa… Annaa… Annaa…
Thavarige Baa Thangi
Thavarige Baa Thangi

Kannalli Kannittu Saakide Nee Usirittu
Thavarina Usira Hinduvaralla
Thavarina Nidire Kadiyuvaralla
Hennige Daiva Pathiyanthe
Hennige Devare Gathiyanthe
Kotta Hennu Kulakke Horaganthe
Atheya Mane Thuthadaru Sariyanthe
Ganda Ballanenu Anna Thangi Mathu
Kopa Nungabeke Thavaru Thane Sothu
Baalya Chendavanna
Baalu Chintheyamma
Thavarige Baa Thangi
Thavarige Baa Thangi

Song Details :

  • Song Name : Thavarige Baa Thangi
  • Movie Name : Thavarige Baa Thangi
  • Cast : Dr.Shivaraj Kumar, Radhika, Anu Prabhakar
  • Released on : 1st Nov 2002
  • Music : Hamsalekha
  • Singers : S.P.Balasubramanyam, K.S.Chitra
  • Lyrics : Hamsalekha
  • Director : Om Sai Prakash
  • Producer : R.S.Gowdru
  • Music Label : Anand Audio

LEAVE A REPLY

Please enter your comment!
Please enter your name here