Home Singers Shreya Ghoshal Ullasada Hoomale Song Lyrics in Kannada – Cheluvina Chitthara

Ullasada Hoomale Song Lyrics in Kannada – Cheluvina Chitthara

91
1
Ullasada Helada Song Kannada Lyrics

ನಾಯಕನನ್ನು ನೆನಪು ಮಾಡಿಕೊಂಡು ನಾಯಕಿ ಹಾಡುವ ಹಾಡು, ಚಿತ್ರದ ನಿರ್ದೇಶಕರಾದ ಎಸ್.ನಾರಾಯಣ್‌ ಸಾಹಿತ್ಯ ಬರೆದಿದ್ದು ಮನೋಮೂರ್ತಿಯವರು ಸಂಗೀತ ಸಂಯೋಜಿಸಿದ್ದಾರೆ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ನಟಿ ಅಮೂಲ್ಯ ನಟಿಸಿದ್ದು ಶ್ರೇಯಾ ಘೋಷಾಲ್ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

The song is sung by the heroine remembering the hero, lyrics written by director S. Narayan, music composed by Manomurthy, Starring Goldenstar Ganesh and actress Amulya, sung by Shreya Ghoshal, the audio rights of the film are owned by renowned audio company Anand Audio.

More Songs From Cheluvina Chitthara :

  • ಹಾಡು : ಉಲ್ಲಾಸದ ಹೂ ಮಳೆ
  • ಸಂಗೀತ : ಮನೋಮೂರ್ತಿ
  • ಗಾಯನ : ಶ್ರೇಯಾ ಘೋಷಾಲ್
  • ಸಾಹಿತ್ಯ : ಎಸ್‌.ನಾರಾಯಣ್
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Ullasada Hoomale Song Lyrics in Kannada

ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ
ಸಂಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ
ಮುಂಜಾನೆಯು ನೀ, ಮುಸ್ಸಂಜೆಯು ನೀ
ನನ್ನೆದೆಯಾ ಬಡಿತವು ನೀ
ಹೃದಯದಲ್ಲಿ ಬೆರೆತವ ನೀ
ಮೊದಮೊದಲು ನನ್ನೊಳಗೆ
ಉದಯಿಸಿದ ಆ ಆಸೆಯು ನೀ
ನನ್ನವನೇ ಎಂದಿಗು ನೀ
ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ

ಮಾತಿಲ್ಲದೆ ಕತೆಯಿಲ್ಲದೇ ದಿನವೆಲ್ಲ ಮೌನವಾದೆ
ನಾ ಕಳೆದು ಹೋದೆನು ಹುಡುಕಾಡಿ ಸೋತೆನು
ಹಸಿವಿಲ್ಲದೇ ನಿದಿರಿಲ್ಲದೇ ದಣಿವಾಗಲೂ ಇಲ್ಲ
ನನ್ನೊಳಗೆ ನೀನಿರೆ ನನಗೇನು ಬೇಡವು
ನನ್‌ ಪಾಠವು ನೀ, ನನ್‌ ಊಟವು ನೀ
ನಾ ಬರೆವ ಲೇಖನಿ ನೀ
ನಾ ಉಡುವಾ ಉಡುಗೆಯು ನೀ
ಊಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ

ಸನಿಸನಿಸ, ಸನಿಸನಿಸ
ಸನಿಸನಿಸ, ಸನಿಸನಿಸ
ಸನಿಸನಿಸ, ಸನಿಸನಿಸ
ಸನಿಸನಿಸ, ಸನಿಸನಿಸ
ಸನಿಸನಿಸ, ಸನಿಸನಿಸ
ಸನಿಸನಿಸ, ಮಗಮಗಮ
ಪಮಪಮಪ

ನನ್ನ ಸ್ನಾನದ ನೀರಲ್ಲಿಯೂ ಬೆರೆತಿದ್ದ ಚೆಲುವಾ ನೀನು
ಕನ್ನಡಿಯ ನೋಡಿದೆ, ನನ್ನೊಡನೆ ಕಾಡಿದೆ
ನಾ ಹಚ್ಚುವ ಕಾಡಿಗೆಯಲಿ ಅವಿತಿದ್ದ ಚೋರ ನೀನು
ನಾನಿಟ್ಟ ಕುಂಕುಮದಿ ಪಳಪಳನೆ ಹೊಳೆಯುವೆ ನೀ
ನಾ ಮುಡಿದ ಮಲ್ಲಿಗೆಗೆ
ಪರಿಮಳ ನೀ, ಒಡೆಯನು ನೀ
ನಾ ಮಲಗೋ ಹಾಸಿಗೆ ನೀ

ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ
ಸಂಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ
ಮುಂಜಾನೆಯು ನೀ, ಮುಸ್ಸಂಜೆಯು ನೀ
ನನ್ನೆದೆಯಾ ಬಡಿತವು ನೀ
ಹೃದಯದಲ್ಲಿ ಬೆರೆತವ ನೀ
ಮೊದಮೊದಲು ನನ್ನೊಳಗೆ
ಉದಯಿಸಿದ ಆಸೆಯು ನೀ
ನನ್ನವನೇ ಎಂದಿಗು ನೀ
ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ

Ullasada Hoomale Song Lyrics in English

Ullasada Hoomale Jinuguthide Nannali
Sankochada Honnole hariyuthide Kannali
Munjaneyu Nee, Mussanjeyu Nee
Nannedeyaa Badithavu Nee
Hrudayadalli Berethava Nee
Modamodalu Nannolage
Udayisida Aa Aaseyu Nee
Nannavane Endigu Nee
Ullasada Hoomale Jinuguthide Nannali

Maathillade Katheyillade Dinavella Mounavade
Naa Kaledu Hodenu Hudukaadi Sothenu
Hasivillade Nidirillade Danivagalu Illa
Nannolage Neenire Nanagenu Bedavu
Nan Paatavu Nee Nan Ootavu Nee
Naa Bareva Lekhani Nee
Naa Uduvaa Udugeyu Nee
Ullasada Hoomale Jinuguthide Nannali

Sanisanisa, Sanisanisa
Sanisanisa, Sanisanisa
Sanisanisa, Sanisanisa
Sanisanisa, Sanisanisa
Sanisanisa, Sanisanisa
Sanisanisa, Magamagama
Pamapamapa

Nanna Snanada Neeralliyu Berethidda Cheluva Neenu
Kannadiya Nodide, Nannodane Kaadide
Naa Hacchuva Kaadigeyali Avithidda Chora Neenu
Naanitta Kumkumadi Palapalane Holeyuve Nee
Naa Mudida Malligege
Parimala Nee, Odeyanu Nee
Naa Malago Haasige Nee

Ullasada Hoomale Jinuguthide Nannali
Sankochada Honnole Hariyuthide Kannali
Munjaneyu Nee, Mussanjeyu Nee
Nannedeyaa Badithavu Nee
Hrudayadalli Berethava Nee
Modamodalu Nannolage
Udayisidaa Aaseyu Nee
Nannavane Endigu Nee
Ullasada Hoomale Jinuguthide Nannali

Song Details :

  • Song Name : Ullasada Hoomale
  • Movie Name : Cheluvina Chitthara
  • Cast : Golden Star Ganesh, Amulya, Komal
  • Music : Mano Murthy
  • Singer : Shreya Ghoshal
  • Lyricist : S.Narayan
  • Director : S.Narayan
  • Producer : S.Narayan
  • Music Label Credits : Anand Audio

1 COMMENT

LEAVE A REPLY

Please enter your comment!
Please enter your name here